ಶಿರಸಿ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಶಿರಸಿ ವಿಭಾಗದ ವತಿಯಿಂದ ಒಂದು ಗ್ರಾಮ ಒಂದು ತಿರಂಗ ಅಭಿಯಾದ ಅಡಿಯಲ್ಲಿ 7500 ಹೆಚ್ಚು ರಾಷ್ಟ ಧ್ವಜಗಳನ್ನು ಉತ್ತರ ಕನ್ನಡ ಜಿಲ್ಲೆಯ ಪ್ರತಿ ಹಳ್ಳಿಗಳಲ್ಲಿ ಧ್ವಜರೋಹಣ ಮಾಡಲಾಯಿತು.
ಅದೇ ರೀತಿಯಲ್ಲಿ ಸ್ವಾತಂತ್ರ್ಯ 75 ರ ಅಮೃತೋತ್ಸವದ ಅಂಗವಾಗಿ ಸುಯೋಗ ವೃದ್ಧಾಶ್ರಮದಲ್ಲಿ ನೂತನ ಕಟ್ಟಡಕ್ಕೆ ಬಣ್ಣ ಬಳಿಯುವ ಹಾಗೂ ಸ್ವಚ್ಚತಾ ಕಾರ್ಯವನ್ನು ಎಬಿವಿಪಿ ಶಿರಸಿ ವತಿಯಿಂದ ಮಾಡಲಾಯಿತು. ಅದೇ ರೀತಿಯಾಗಿ ಮುಂಬರುವ ದಿನಗಳಲ್ಲಿ 75 ಸರಕಾರಿ ಶಾಲೆಗಳ ಹೊಸತನದ ಬಣ್ಣಗಳಿಂದ ಕಂಗೊಳಿಸುವುದಾಗಿ ಎಬಿವಿಪಿ ಎಲ್ಲಾ ಕಾರ್ಯಕರ್ತರು ನಿಶ್ಚಿಯಿಸಿದರು. ಈ ಕಾರ್ಯಕ್ರಮದಲ್ಲಿ ವಿಭಾಗ ಎಲ್ಲಾ ಕಾರ್ಯಕರ್ತರು, ಹಿತೈಷಿಗಳು ಅಧ್ಯಾಪಕರು ಗ್ರಾಮದ ಸದಸ್ಯರು ಸಹಕರಿಸಿದರು.