• Slide
  Slide
  Slide
  previous arrow
  next arrow
 • ಭೂಮಿ ಹಕ್ಕು ಸಂವಿಧಾನಾತ್ಮಕ‌ ಹಕ್ಕು; ರವೀಂದ್ರ ನಾಯ್ಕ

  300x250 AD

  ಶಿರಸಿ: ಅರಣ್ಯವಾಸಿಗಳ ಭೂಮಿ ಹಕ್ಕಿನ ಸಮಸ್ಯೆ ಕುರಿತಾಗಿ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ 75ನೇ ಸ್ವಾತಂತ್ರ್ಯೋತ್ಸವವನ್ನು ‘ಭೂಮಿ ಹಕ್ಕು ವಂಚಿತರಿಗೆಲ್ಲಿ ಸ್ವಾತಂತ್ರ್ಯ..?’ ಎಂಬ ಘೋಷವಾಕ್ಯದೊಂದಿಗೆ ಆಚರಿಸಲಾಯಿತು.

  ಪಟ್ಟಣದ ಭೂಮಿ‌ ಹಕ್ಕು ಹೋರಾಟಗಾರರ ವೇದಿಕೆಯ ಕಾರ್ಯಾಲಯದಿಂದ ಅತಿಕ್ರಮಣದಾರರು ತ್ರಿವರ್ಣ‌ ಧ್ವಜದೊಂದಿಗೆ ‘ಭೂಮಿ ಹಕ್ಕು ವಂಚಿತರಿಗೆಲ್ಲಿ ಸ್ವಾತಂತ್ರ್ಯ’ ಎಂಬ ಘೋಷಣೆಯೊಂದಿಗೆ ವೇದಿಕೆಯ ಕಾರ್ಯಾಲಯದಿಂದ ಝೂ ಸರ್ಕಲ್ ವರೆಗೆ ಪಾದಯಾತ್ರೆ ಕೈಗೊಂಡು ಅರಣ್ಯ ಅತಿಕ್ರಮಣದಾರರ ಸಮಸ್ಯೆಯ ಕುರಿತು ಸರ್ಕಾರದ ಗಮನ ಸೆಳೆದರು.

  ನಂತರ ಕಾರ್ಯಾಲಯದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ‘ಅತಿಕ್ರಮಣದಾರರಿಗೆ ಭೂಮಿ ಹಕ್ಕು ಇದ್ದರೂ ಅಧಿಕಾರಿಗಳ ಕಿರುಕುಳ, ದೌರ್ಜನ್ಯ, ಒಕ್ಕಲೆಬ್ಬಿಸುವ ಘಟನೆಗಳು ನಡೆಯುತ್ತಿವೆ. ಅರಣ್ಯವಾಸಿಗಳ ಮೇಲೆ ಕಾನೂನು ಕ್ರಮ ಜರುಗಿಸುತ್ತಿರುವುದು ಮತ್ತು ಸರ್ವೋಚ್ಛ ನ್ಯಾಯಾಲಯದಿಂದ ಒಕ್ಕಲೆಬ್ಬಿಸುವಿಕೆಯ ಭಿತಿಯಿಂದ ಭೂಮಿ ಸಾಗುವಳಿದಾರರು ನಿರಾಶ್ರಿತರಾಗುವ ಭಯದಲ್ಲಿದ್ದಾರೆ.‌ಈ ಹಿನ್ನೆಲೆಯಲ್ಲಿ ಭೂಮಿ ಹಕ್ಕಿನ ಸಮಸ್ಯೆ ಕುರಿತಾಗಿ ಸರಕಾರದ ಗಮನ ಸೆಳೆಯಲು ಭೂಮಿ ಹಕ್ಕು ವಂಚಿತರಿಗೆಲ್ಲಿ ಸ್ವಾತಂತ್ರ್ಯ ? ಎಂಬ ಘೋಷಣೆಯೊಂದಿಗೆ ಸ್ವಾತಂತ್ರ್ಯೋತ್ಸವವನ್ನು ಆಚರಿಸಿದ್ದೇವೆ. ಭೂಮಿ ಹಕ್ಕು ಸಂವಿಧಾನಾತ್ಮಕವಾದ ಹಕ್ಕಾಗಿದೆ ಎಂದು ಹೇಳಿದರು.

  ಈ ಸಂದರ್ಭದಲ್ಲಿ ಇತ್ತೀಚಿಗೆ ಸೈನಿಕನಾಗಿ ಆಯ್ಕೆಯಾಗಿ ದೇಶಸೇವೆಯಲ್ಲಿ ತೊಡಗಿಸಿಕೊಂಡಿರುವ ಸಿದ್ದಾಪುರ ತಾಲೂಕಿನ‌ ತಂಡಾಗುಂಡಿ ಗ್ರಾ.ಪಂ ವ್ಯಾಪ್ತಿಯ ನವೀನ್ ಹರಿಹರ ನಾಯ್ಕ ಅವರನ್ನು ವೇದಿಕೆಯ ವತಿಯಿಂದ ಸನ್ಮಾನಿಸಲಾಯಿತು.

  300x250 AD

  ಈ ಸಂದರ್ಭದಲ್ಲಿ ಹರಿಹರ ನಾಯ್ಕ ಹುಕ್ಕಳಿ, ವೇದಿಕೆಯ ಮುಖಂಡರಾದ ಇಬ್ರಾಹಿಂ ಸಾಬ, ಲಕ್ಷ್ಮಣ ಮಾಳ್ಳಕ್ಕನವರ, ಶಿವಪ್ಪ ಹಂಚಿನಕೇರಿ, ದ್ಯಾವಾ ಗೌಡ ಹೆಗ್ಗೆ, ಸೀತಾರಾಮ ಗೌಡ ಹುಕ್ಕಳಿ, ರಾಜು ನರೇಬೈಲ್, ಮುಂಡಗೋಡ ಅಧ್ಯಕ್ಷ ಶಿವಾನಂದ ಜೋಗಿ, ಸ್ವಾಮಿ ಹಿರೇಮಠ, ಸೀತಾರಾಮ ಗೌಡ ಸಿದ್ಧಾಪುರ, ಎಮ್ ಪಿ ಗೌಡ ಹುಕ್ಕಳಿ, ರಾಜು ಉಗ್ರಾಣಕರ, ಮಧುಕರ ಜೋಗಿನಮನೆ, ಮಾಬ್ಲೇಶ್ವರ ನಾಯ್ಕ ಜೋಗಿನಮನೆ, ವಿನಾಯಕ ನಾಯ್ಕ ಜೋಗಿನಮನೆ, ಸತ್ಯಾನಂದ ನಾಯ್ಕ ಜೋಗಿನಮನೆ, ಭದ್ರಾ ಗೌಡ ಹೆಗ್ಗೆ ಮುಂತಾದವರು ಉಪಸ್ಥಿತರಿದ್ದರು.

  ಕಾರ್ಯಕ್ರಮದಲ್ಲಿ ಸತೀಶ ನಾಯ್ಕ ಮದರಳ್ಳಿ ಸ್ವಾಗತಿಸಿದರು, ನಾಗಪತಿ ಗೌಡ ಹುತ್ತಗಾರ ಪ್ರಾಸ್ತವಿಕ ಮಾತನಾಡಿದರು, ಮಂಜುನಾಥ ನಾಯ್ಕ ಹುತ್ಗಾರ ವಂದಿಸಿದರು

  Share This
  300x250 AD
  300x250 AD
  300x250 AD
  Leaderboard Ad
  Back to top