ಸಿದ್ದಾಪುರ: ಆ. 16 ಸೋಮವಾರದಂದು ತಾಲೂಕಿನ ವಿವಿಧೆಡೆ ಲಸಿಕಾ ಶಿಬಿರ ನಡೆಯಲಿದೆ.
ಪ್ರಾಥಮಿಕ ಆರೋಗ್ಯ ಕೇಂದ್ರ ಕೋಲಸಿರ್ಸಿ ವತಿಯಿಂದ ಬಿದ್ರಕಾನ್ ಉಪಕೇಂದ್ರದಲ್ಲಿ ಲಸಿಕಾ ಶಿಬಿರ ನಡೆಯಲಿದ್ದು 200 ಡೋಸ್ ಲಸಿಕೆ ಲಭ್ಯವಿದೆ.
ನಗರದ ವಾರ್ಡ್ ಸಂಖ್ಯೆ 6, 9,10 ರ ನಿವಾಸಿಗಳಿಗೆ ಹಿರಿಯ ಗಂಡುಮಕ್ಕಳ ಪ್ರಾಥಮಿಕ ಶಾಲೆಯಲ್ಲಿ ಲಸಿಕಾ ಶಿಬಿರವಿದ್ದು 300 ಡೋಸ್ ಲಸಿಕೆ ಲಭ್ಯವಿದೆ.
ಕಾನಸೂರು ಆರೊಗ್ಯ ಕೇಂದ್ರದಲ್ಲಿ 200 ಡೋಸ್ ಲಸಿಕೆ ಲಭ್ಯವಿದ್ದು ಕಾನಸೂರು ಸಭಾಭವನದಲ್ಲಿ ಲಸಿಕೆ ನೀಡಲಾಗುತ್ತದೆ.
ಬೀಳಗಿ ಪ್ರಾಥಮಿಕ ಶಾಲೆಯಲ್ಲಿ ಲಸಿಕಾ ಶಿಬಿರ ನಡೆಯಲಿದ್ದು 200 ಡೋಸ್ ಲಸಿಕೆ ಲಭ್ಯವಿದೆ. ಕೋರ್ಲಕೈ ಆಸ್ಪತ್ರೆಯಲ್ಲಿ 100 ಡೋಸ್ ಲಸಿಕೆ ಲಭ್ಯವಿದ್ದು ಕೋರ್ಲಕೈ ಗ್ರಾ.ಪಂ.ಸಭಾಭವನದಲ್ಲಿ ಲಸಿಕೆ ನೀಡಲಾಗುತ್ತದೆ. ಹಸುವಂತೆ ಉಪಕೇಂದ್ರದ ವತಿಯಿಂದ ಹೊಸಳ್ಳಿ ಪ್ರಾಥಮಿಕ ಶಾಲೆಯಲ್ಲಿ ಲಸಿಕಾ ಶಿಬಿರ ನಡೆಯಲಿದ್ದು 100 ಡೋಸ್ ಲಸಿಕೆ ಲಭ್ಯವಿದೆ.
ಕ್ಯಾದಗಿ ಆರೋಗ್ಯ ಕೇಂದ್ರದ ವತಿಯಿಂದ ಚಪ್ಪರಮನೆ ಪ್ರಾಥಮಿಕ ಶಾಲೆಯಲ್ಲಿ ಲಸಿಕಾ ಶಿಬಿರ ನಡೆಯಲಿದ್ದು 200 ಡೋಸ್ ಲಸಿಕೆ ಲಭ್ಯವಿದೆ.
ಹೇರೂರು ಆರೋಗ್ಯ ಕೇಂದ್ರದ ವತಿಯಿಂದ ಹಸರಗೋಡ ಗ್ರಾಮಪಂಚಾಯತದಲ್ಲಿ 100 ಡೋಸ್ ಹಾಗೂ ತಂಡಾಗುಂಡಿ ಗ್ರಾಮಪಂಚಾಯತ್ ದಲ್ಲಿ 100 ಡೋಸ್ ಲಸಿಕೆ ಲಭ್ಯವಿದೆ.
ಎರಡನೇ ಡೋಸ್ ಪಡೆಯುವ ಗರ್ಭಿಣಿ ಮತ್ತು ಬಾಣಂತಿಯರಿಗೆ ಆದ್ಯತೆ ನೀಡಲಾಗುವುದು ಎಂದು ಸಿದ್ದಾಪುರ ತಾಲೂಕಾ ಆರೋಗ್ಯ ವೈದ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.