eUK ವಿಶೇಷ: 75 ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಹಿನ್ನಲೆಯಲ್ಲಿ ಖ್ಯಾತ ಸಂಗೀತ ಗಾಯಕ, ಬಿಗ್ ಬಾಸ್ ಖ್ಯಾತಿ ರವಿ ಮೂರೂರು ಮತ್ತು ತಂಡದವರಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾರ್ಥನೆಯನ್ನು ಯಕ್ಷಗಾನ ಶೈಲಿಯಲ್ಲಿ ಹಾಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಮನ್ನಣೆ ಗಳಿಸಿದೆ.
ವಿವಿಧ ಜಾನಪದ ಹಾಡುಗಳು ಸೇರಿದಂತೆ ಅನೇಕ ರೀತಿಯ ಗೀತೆಗಳನ್ನು ಯಕ್ಷಗಾನ ಶೈಲಿಯಲ್ಲಿ ಹಾಡಿದ್ದು ಇತ್ತಿಚೆಗೆ ಜನಪ್ರಿಯತೆ ಪಡೆದಿದ್ದವು. ಆದರೆ ಇದೀಗ ರಾಷ್ಟ್ರೀಯ ಸ್ವಯಂಸೇವಕ ಸಂಘದ ಗೀತೆಯೊಂದನ್ನು ಯಕ್ಷಗಾನ ಹಾಡಿನ ಶೈಲಿಯಲ್ಲಿ ಮಾಡಿರುವುದು ವಿಭಿನ್ನ ಪ್ರಯೋಗ ಎನಿಸಿದ್ದು, ಭಾನುವಾರ ಸ್ವಾತಂತ್ರ್ಯೋತ್ಸವ ನಿಮಿತ್ತ ಆ ಹಾಡಿನ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಲಾಗಿದೆ.
ಜಿಲ್ಲೆಯ ಸಂಗೀತ ಸಾಧಕರಲ್ಲಿ ಒಬ್ಬರಾದ ಬಿಗ್ ಬಾಸ್ ಖ್ಯಾತಿಯ ರವಿ ಮೂರೂರು, ಈ ಪ್ರಯೋಗಕ್ಕೆ ಮುಂದಾಗಿದ್ದು, ಅವರು ತಮ್ಮ ಎಂದಿನ ಯಕ್ಷಗಾನ ಧ್ವನಿಯಲ್ಲಿ ಸಂಘದ ಗೀತೆಯನ್ನು ಪ್ರಸ್ತುತ ಪಡಿಸಿದ್ದಾರೆ. ಅವರಿಗೆ ಮದ್ದಳೆಯಲ್ಲಿ ಅನಿರುದ್ಧ ವರ್ಗಾಸರ, ಚಂಡೆ ವಾದಕರಾಗಿ ಪ್ರಸನ್ನ ಹೆಗ್ಗಾರ್ ಸಹಕಾರ ನೀಡಿದ್ದಾರೆ. ಈ ವಿಡಿಯೋವನ್ನು ಶ್ರೀಪ್ರಭ ಸ್ಟುಡಿಯೋದಲ್ಲಿ ಚಿತ್ರೀಕರಣ ಮಾಡಲಾಗಿದೆ. ಈ ಹಾಡನ್ನು ಶ್ರೀಪ್ರಭ ಸ್ಟುಡಿಯೋದ ಯೂಟ್ಯೂಬ್ ಚಾನೆಲ್ ಮೂಲಕವೂ ನೋಡಬಹುದಾಗಿದ್ದು, ಅದರ ಲಿಂಕ್ ಇಲ್ಲಿದೆ. https://youtu.be/D1WX_MWErH4