ಶಿರಸಿ: ತಾಲೂಕಿನಲ್ಲಿ ಆ.16 ಸೋಮವಾರದಂದು 3,250 ಡೋಸ್ ಕೋವೀಶೀಲ್ಡ್ ಹಾಗೂ 500 ಡೋಸ್ ಕೋವ್ಯಾಕ್ಸೀನ್ ಲಸಿಕೆ ಲಭ್ಯವಿದೆ.
ಅವುಗಳಲ್ಲಿ ಕೋವೀಶೀಲ್ಡ್ ಲಸಿಕೆಯು ದಾಸನಕೊಪ್ಪದಲ್ಲಿ 300 ಡೋಸ್, ಬಿಸ್ಲಕೊಪ್ಪ 300 ಡೋಸ್, ಸುಗಾವಿ 300 ಡೋಸ್, ಬನವಾಸಿ 300 ಡೋಸ್, ಹೆಗಡೆಕಟ್ಟಾ 300 ಡೋಸ್, ಸಾಲ್ಕಣಿ 300 ಡೋಸ್, ಹುಲೇಕಲ್ 300 ಡೋಸ್, ರೇವಣ ಕಟ್ಟಾ 150 ಡೋಸ್, ಮೆಣಸಿ 150 ಡೋಸ್, ಕಕ್ಕಳ್ಳಿ 100 ಡೋಸ್, ಪತ್ರಿಕಾ ಭವನದಲ್ಲಿ 50 ಡೋಸ್, ಜೆ ಎಂ ಎಫ಼್ ಸಿ ಯಲ್ಲಿ 200 ಡೋಸ್, ಗಣೇಶನಗರದಲ್ಲಿ 250 ಡೋಸ್, ವಿವೇಕಾನಂದ ನಗರ ಹಾಗೂ ಕೆ ಎಚ್ ಬಿ ಕಾಲನಿಯಲ್ಲಿ 250 ಡೋಸ್ ಲಭ್ಯವಿದ್ದು ಮೊದಲ ಹಾಗೂ ಎರಡನೇ ಡೋಸ್ ಪಡೆಯುವವರಿಗೆ ನೀಡಲಾಗುತ್ತದೆ.
ಹಾಗೂ ಕೋವ್ಯಾಕ್ಸಿನ್ ಲಸಿಕೆಯು ನಗರ (UPHC) ಕೋಟೆಕೆರೆ ಸಮೀಪ ಅರ್ಬನ್ ಪ್ರೈಮರಿ ಹೆಲ್ತ್ ಸೆಂಟರ್ ಲಿ 500 ಡೋಸ್ ಲಭ್ಯವಿದ್ದು, ಎರಡನೇ ಡೋಸ್ ಪಡೆಯುವವರಿಗೆ ಮಾತ್ರ ನೀಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.