ಕುಮಟಾ: ತಾಲೂಕಿನ ಹಿರೇಗುತ್ತಿಯ ಸೆಕೆಂಡರಿ ಹೈಸ್ಕೂಲಿನಲ್ಲಿ 75 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಮಹಾತ್ಮಾಗಾಂಧಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಹೊನ್ನಪ್ಪ ನಾಯಕ ಧ್ವಜಾರೋಹಣವನ್ನು ನೆರೆವೇರಿಸಿದರು.
ಕಾರ್ಯಕ್ರಮದಲ್ಲಿ ಎಸ್ ಎಸ್ ಎಲ್ ಸಿಯಲ್ಲಿ ಪ್ರಥಮ ಸ್ಥಾನ ಪಡೆದ ಸುಹಾಸ ಕೃಷ್ಣ ಶೆಟ್ಟಿ, ದ್ವಿತೀಯ ಸ್ಥಾನ ಪಡೆದ ಶೃತಿ ಭಂಡಾರಿ, ತೃತೀಯ ಸ್ಥಾನ ಪಡೆದ ನಾಗಶ್ರೀ ಪಟಗಾರ ಅವರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಮೋಹನ ಬಿ ಕೆರೆಮನೆ, ಉಪಾಧ್ಯಕ್ಷ ಶ್ರೀಕಾಂತ ನಾಯಕ, ಸದಸ್ಯರಾದ ನಾಗಪ್ಪ ಕೆರೆಮನೆ, ರಮಾನಂದ ಜಿ ಪಟಗಾರ, ಪ್ರಾಂಶುಪಾಲ ಪ್ರೇಮಾನಂದ ಗಾಂವಕರ, ಮುಖ್ಯಾಧ್ಯಾಪಕ ರೋಹಿದಾಸ ಎಸ್ ಗಾಂವಕರ, ಶಿಕ್ಷಕರಾದ ಬಾಲಚಂದ್ರ ಹೆಗಡೇಕರ್, ನಾಗರಾಜ ಜಿ ನಾಯಕ, ಎನ್ ರಾಮು ಹಿರೇಗುತ್ತಿ, ಮಹಾದೇವ ಗೌಡ, ವಿಶ್ವನಾಥ ಬೇವಿನಕಟ್ಟಿ, ಇಂದಿರಾ ನಾಯಕ, ಜಾನಕಿ ಗೊಂಡ, ಶಿಲ್ಪಾ ನಾಯಕ ಮಹಾತ್ಮಾಗಾಂಧಿ ಇಂಗ್ಲೀಷ್ ಮೀಡಿಯಂ ಸ್ಕೂಲಿನ ಸುಮನ್, ವಸಂತಬಾಯಿ ಉಪಸ್ಥಿತರಿದ್ದರು.