ಕುಮಟಾ: ತಾಲೂಕಿನ ಕೊಂಕಣಎಜ್ಯುಕೇಶನ್ ಟ್ರಸ್ಟ್ ವತಿಯಿಂದ 75ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಟ್ರಸ್ಟ್ ನ ಅಧ್ಯಕ್ಷ ವಿಠ್ಠಲ ನಾಯಕ ಧ್ವಜಾರೋಹಣವನ್ನು ನೆರವೇರಿಸಿದರು. ಸಂಸ್ಥೆಯ ಕಾರ್ಯದರ್ಶಿ ಮುರಳಿಧರ ಪ್ರಭು ಮಾತನಾಡಿ, ನನಗಿಂತ ದೇಶಮುಖ್ಯ ಅನ್ನುವುದು ಪ್ರತಿಯೊಬ್ಬರ ನಿಲುವಾದಾಗ ಮಾತ್ರ ದೇಶದ ಅಭಿವೃದ್ಧಿಸಾಧ್ಯ ಎಂದರು.
75 ನೇ ಸ್ವಾತಂತ್ರ್ಯೋತ್ಸವದ ಶುಭ ಸಂದರ್ಭದಲ್ಲಿ 75 ಸ್ವಾತಂತ್ರ್ಯಹೋರಾಟಗಾರರ ಭಾವಚಿತ್ರಗಳನ್ನು ಅನಾವರಣಗೊಳಿಸಿ ಭಾರತದ ನಕಾಶೆಯಸುತ್ತ 75 ಹಣತೆಯನ್ನು ಬೆಳಗಿಸಿ ಸಂಭ್ರಮದಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.