ಶಿರಸಿ: ತಾಲೂಕಿನ ನರೇಬೈಲ್ ನಲ್ಲಿರುವ ಚಂದನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಂಭ್ರಮದಿಂದ ೭೫ನೆೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಸಂಸ್ಥೆಯ ಕಾರ್ಯದರ್ಶಿ ಎಲ್ ಎಂ ಹೆಗಡೆ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ನಮ್ಮ ದೇಶದ ಅಭಿವೃದ್ಧಿಯಲ್ಲಿ ಭಾರತೀಯರೆಲ್ಲರ ಕೊಡುಗೆ ಅಪಾರವಾದದ್ದು. ಸ್ವಾತಂತ್ರ್ಯ ಎಂಬುದನ್ನು ಸ್ವೇಚ್ಚಾಚಾರ ಎಂದು ತಿಳಿಯದೇ, ಕರ್ತವ್ಯವೆಂದು ಭಾವಿಸಿ, ಆ ದಿಶೆಯಲ್ಲಿ ನಾವೆಲ್ಲರೂ ಕೂಡಿ ಸಾಗಬೇಕು ಎಂದರು.
ಆಡಳಿತಾಧಿಕಾರಿ ವಿದ್ಯಾ ನಾಯ್ಕ ಸ್ವಾತಂತ್ರ್ಯೋತ್ಸವದ ಶುಭಾಶಯ ತಿಳಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು ಉಪಸ್ಥಿತರಿದ್ದರು.