ಶಿರಸಿ: 75 ನೇ ಸ್ವಾತಂತ್ಸ್ಯೋತ್ಸವದ ಅಂಗವಾಗಿ ನಗರದ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಸರಳವಾಗಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ಸಹಾಯಕ ಆಯುಕ್ತೆ ಆಕೃತಿ ಬನ್ಸಾಲ್, ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರ್ಯ ದಿನಾಚರಣೆಯ ಸಂದೇಶ ನೀಡಿದರು. ಸಾವಿವಾರು ವರ್ಷಗಳ ಸಾಂಸ್ಕೃತಿಕ ಇತಿಹಾಸವನ್ನು ಹೊಂದಿದ್ದ ಭಾರತ, ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದ ದಿನ ಇದಾಗಿದೆ. ಮಹಾತ್ಮ ಗಾಂಧಿ, ಸುಭಾಷ್ ಚಂದ್ರ ಭೋಸ್ ಸೇರಿದಂತೆ ವಿವಿಧ ನಾಯಕರ ತ್ಯಾಗದ ಫಲವಾಗಿ ನಮಗೆ ಸ್ವಾತಂತ್ರ್ಯ ದೊರೆತಿದೆ. ಅದನ್ನು ರಕ್ಷಿಸುವ ಕೆಲಸ ನಮ್ಮಿಂದಾಗಬೇಕು.
ಇಂದು ಜಗತ್ತಿಗೆ ಭಾರತ ಸ್ವಾಭಿಮಾನಿ ರಾಷ್ಟ್ರವೆನ್ನುವ ಸಂದೇಶ ಬಲವಾಗಿ ಹೋಗಬೇಕು. ಓಲಂಫಿಕ್ ಕ್ರೀಡೆಯ ವಿವಿಧ ವಿಭಾಗದಲ್ಲಿ ಅತ್ಯಧ್ಭುತ ಸಾಧನೆಗೈದಿರುವುದು ನಮಗೆಲ್ಲರಿಗೂಹೆಮ್ಮೆಯ ಸಂಗತಿಯಾಗಿದೆ ಎಂದರು.
ಕೊವಿಡ್ ನಿಯಂತ್ರಣಕ್ಕೆ ಅವಶ್ಯಕವಾದ ಮೂಲಭೂತ ಅವಶ್ಯಕತೆಗಳನ್ನು ಸರಕಾರ ಇಗಾಗಲೇ ಕೈಗೊಂಡಿದ್ದು, ಮೂರನೇ ಅಲೆಯ ಮುನ್ನೆಚ್ಚರಿಕೆಯನ್ನು ವಹಿಸಲಾಗಿದೆ ಎಂದರು.
ತಾಲೂಕಿನ ವಿವಿಧ ವಿಭಾಗದಲ್ಲಿ ಸಾಧನೆಗೈದ ಸಾಧಕರನ್ನು ಈ ವೇಳೆ ಸನ್ಮಾನಿಸಲಾಯಿತು. ನಗರ ಸಭೆಯ ಪೌರ ಕಾರ್ಮಿಕರಾದ ಶಂಕರ್ ರಾಜಾ, ಗ್ರಾಮೀಣ ಪೋಲೀಸ್ ಠಾಣಾ ಸಿಬ್ಬಂದಿ ಚೇತನ್ ಕುಮಾರ್, ಅಂತರಾಷ್ಟ್ರೀಯ ಖ್ಯಾತಿಯ ಯೋಗ ಪಟು ಮಂಗಳಗೌರಿ ಭಟ್ಟ, ಅತ್ಯುತ್ತಮ ಅಂಗನವಾಡಿ ಕೇಂದ್ರ ನಿರ್ಮಾಣದಲ್ಲಿ ಕಾಳಜಿ ವಹಿಸಿದ ಶ್ರೀಮತಿ ಅರುಣಾ, ಸರಕಾರ ಆಸ್ಪತ್ರೆ ಆಢಳಿತಾಧಿಕಾರಿ ಡಾ. ಗಜಾನನ ಭಟ್ಟರನ್ನು ಸನ್ಮಾನಿಸಿದರು.
ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಅಶೀಸರ, ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ ಮಾತನಾಡಿದರು. ವೇದಿಕೆಯಲ್ಲಿ ನಗರ ಸಭೆ ಉಪಾಧ್ಯಕ್ಷೆ ವೀಣಾ ಶೆಟ್ಟಿ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ನಂದನ ಸಾಗರ, ಜಿ ಪಂ ಸದಸ್ಯೆ ಉಷಾ ಹೆಗಡೆ, ಡಿವೈಎಸ್ಪಿ ರವಿ ನಾಯ್ಕ, ತಹಶೀಲ್ದಾರ ಎಮ್ ಆರ್ ಕುಲಕರ್ಣಿ ಸೇರಿದಂತೆ ಇನ್ನಿತರರು ಇದ್ದರು.
ಕಾರ್ಯಕ್ರಮದಲ್ಲಿ ಶಿರಸಿ ಗೃಹ ರಕ್ಷಕ ದಳ, ಅರಣ್ಯ ಇಲಾಖೆ, ಪೋಲೀಸ್ ಇಲಾಖೆಯ ಸಿಬ್ಬಂದಿಗಳು ಭಾಗಿಯಾಗಿದ್ದರು. ನಗರದ ವಿವಿಧ ಶಾಲಾ ಶಿಕ್ಷಕರು ರಾಷ್ಟ್ರಗೀತೆ, ವಂದೇ ಮಾತರಮ್, ರೈತಗೀತೆ, ಧ್ವಜಗೀತೆಯನ್ನು ಸುಶ್ರಾವ್ಯವಾಗಿ ಹಾಡಿದರು.