ಕುಮಟಾ : ತಾಲೂಕಿನ ಪ್ರಸಿದ್ಧ ದೀವಗಿ ಮಠದ ಅವಧೂತ ಶ್ರೀ ರಮಾನಂದ ಸ್ವಾಮೀಜಿಗಳು(95) ಶನಿವಾರ ರಾತ್ರಿ ರಾಮೈಕ್ಯರಾದರು.
ನಾಡಿನಾದ್ಯಂತ ಅಪಾರ ಶಿಷ್ಯವೃಂದವನ್ನು ಹೊಂದಿದ್ದ ಶ್ರೀ ರಮಾನಂದ ಸ್ವಾಮೀಜಿ ಅವರು ಇತ್ತೀಚೆಗೆ ವಯೋಸಹಜ ಅಸ್ವಸ್ಥತೆಯಿಂದ ಬಳಲುತ್ತಿದ್ದರು. ಅವರನ್ನು ಚಿಕಿತ್ಸೆಗಾಗಿ ಕುಮಟಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.
ಅವಧೂತರು ಇಹಲೋಕ ತ್ಯಜಿಸಿದ ಸುದ್ದಿಯಿಂದ ಮಠದ ಶಿಷ್ಯ ವೃಂದ ಶೋಕ ಸಾಗರದಲ್ಲಿ ಮುಳುಗಿದೆ. ಅನೇಕ ಭಕ್ತರು ದೀವಗಿ ಮಠದತ್ತ ಆಗಮಿಸುತ್ತಿದ್ದು, ಕಂಬನಿ ಮಿಡಿದಿದ್ದಾರೆ. ದೀವಗಿಯಲ್ಲಿ ಮಠ ಸ್ಥಾಪಿಸಿ, ಶ್ರೀ ಹನುಮಂತನ ದೇವಸ್ಥಾನ ನಿರ್ಮಿಸಿದ ಕೀರ್ತಿ ಅವಧೂತರಿಗೆ ಸಲ್ಲುತ್ತದೆ.