ಶಿರಸಿ: ಕಳೆದ ಜುಲೈನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಭೂಮಿ, ಮನೆ ಕಳೆದುಕೊಂಡು ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಸ್ವರ್ಣವಲ್ಲೀ ಮಹಾ ಸಂಸ್ಥಾನದಿಂದ ನೆರವು ನೀಡಿ ಧೈರ್ಯ ತುಂಬುವ ಕಾರ್ಯ ನಡೆಯುತ್ತಿದೆ.
ಯಲ್ಲಾಪುರ ತಾಲೂಕಿನ ಕಳಚೆ, ಅಂಕೋಲಾದ ಗುಳ್ಳಾಪುರ ಭಾಗದಲ್ಲಿ ನೆರೆ ಹಾನಿಯಾದ ವೇಳೆಯಲ್ಲೂ ಸ್ವರ್ಣವಲ್ಲೀ ಸಂಸ್ಥಾನದ ವತಿಯಿಂದ ಸಂತ್ರಸ್ತರಿಗೆ ತಕ್ಷಣವೇ ಸಹಾಯ ನೀಡಲಾಗಿದೆ.
ಈ ಮಧ್ಯೆ ಸಿದ್ದಾಪುರ ತಾಲೂಕಿನ ಬಾಳೇಸರ, ಹೇರೂರು, ಹೊಪೇಟೆಬಯಲು ಪ್ರದೇಶದ ನೆರೆ ಪೀಡಿತರಿಗೆ ಮಠದಿಂದ ಆಹಾರ ಧಾನ್ಯ ತಲುಪಿಸಲಾಯಿತು. ಅಕ್ಕಿ, ಬೆಲ್ಲ, ಅವಲಕ್ಕಿ, ಹೆಸರುಬೇಳೆ, ಉಪ್ಪು, ತೊಗರಿಬೆಲ್ಲ, ಕೊಬ್ಬರಿ ಎಣ್ಣೆ, ಒಣ ಮೆಣಸು ಸೇರಿದಂರೆ ಇತರ ವಸ್ತುಗಳಿರುವ ಕಿಟ್‍ನ್ನು ಸುಮಾರು 40 ಕುಟುಂಬಗಳಿಗೆ ವಿತರಿಸಿ ನೆರವಿನ ಹಸ್ತ ನೀಡಲಾಯಿತು.
ನೆರೆಯಿಂದ ಸಂಕಷ್ಟ ಅನುಭವಿಸುತ್ತಿರುವವರಿಗೆ ಏನಾದರೂ ನೆರವು ನೀಡಬೇಕು ಎಂಬುದು ಸ್ವರ್ಣವಲ್ಲೀ ಮಠಾಧೀಶರಾದ ಶ್ರೀಮತ್ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳ ಆಶಯವಾಗಿದ್ದು, ಚಾತುರ್ಮಾಸ್ಯ ವೃತದ ನಡುವೆ ಕೂಡ ಸ್ವಾಮೀಜಿಗಳು ಸ್ಪಂದಿಸುವ ಕಾರ್ಯ ಮಾಡುತ್ತಿದ್ದಾರೆ. ಶಾಶ್ವತ ಪರಿಹಾರ ನೀಡಲು ಶ್ರೀಗಳು ಚಿಂತನೆ ನಡೆಸಿದ್ದು, ಈ ಕಾರಣದಿಂದ ಸ್ವರ್ಣವಲ್ಲೀ ಶ್ರೀಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನವು ಸಾರ್ವಜನಿಕರ ನೆರವು ಕೇಳುತ್ತಿದೆ.
ದಾನಿಗಳು KRB0000707-7072500100707001ಗೆನೇರವಾಗಿ ಕೂಡ ಜಮಾ ಮಾಡಬಹುದಾಗಿದೆ.ವಿವರಗಳಿಗೆ 08384296555ಗೆ ಸಂಪರ್ಕ ಮಾಡಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.