ಶಿರಸಿ: ಇಲ್ಲಿನ ಸುಜ್ಞಾನ ವೇದಿಕೆ ಹಾಗೂ ಕವಿಕಾವ್ಯ ಬಳಗದ ಸಂಯುಕ್ತ ಆಶ್ರಯದಲ್ಲಿ ಭವ್ಯಾ ಹಳೆಯೂರು ಅವರು ರಚಿಸಿರುವ “ಶೂನ್ಯಗರ್ಭ” ಕಥಾಸಂಕಲನವು ಅ.15 ರಂದು ಮಧ್ಯಾಹ್ನ 3 ಗಂಟೆಗೆ ಎಪಿಎಂಸಿ ರೈತಭವನದಲ್ಲಿ ಲೋಕಾರ್ಪಣೆಗೊಳ್ಳಲಿದೆ.
ಹಿರಿಯ ಸಾಹಿತಿ ಭಾಗೀರಥಿ ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಬರಹಗಾರ್ತಿ ಹಾಗೂ ಉಪನ್ಯಾಸಕಿ ಎನ್. ಆರ್. ರೂಪಶ್ರೀ ಕೃತಿ ಬಿಡುಗಡೆಗೊಳಿಸುವರು.
ಸಾಹಿತಿ ಹಾಗೂ ಅಂಕಣ ಬರಹಗಾರ ಸಂತೋಷಕುಮಾರ ಮೆಹೆಂದಳೆ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಕಥೆಗಾರ ದತ್ತಗುರು ಕಂಠಿ ಕೃತಿ ಪರಿಚಯಿಸುವರೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.