ಶಿರಸಿ: ಇಲ್ಲಿನ ಸಾಹಿತ್ಯ ಚಿಂತಕರ ಚಾವಡಿ ವತಿಯಿಂದ ಆ. 16 ರಂದು ಸಂಜೆ 4 ಗಂಟೆಗೆ ನೆಮ್ಮದಿ ಕುಟೀರದಲ್ಲಿ ಕವಿಗೋಷ್ಟಿ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮದ ಉದ್ಘಾಟಕರಾಗಿ ಸಾಹಿತಿ, ಪತ್ರಕರ್ತ ಅಶೋಕ್ ಹಾಸ್ಯಗಾರ ಆಗಮಿಸಲಿದ್ದು, ಚಿಂತಕರ ಚಾವಡಿಯ ಅಧ್ಯಕ್ಷ ಎಸ್.ಎಸ್.ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಬಹುಮಾನ ವಿತರಣೆಯನ್ನು ಕಥೆಗಾರ ಕೆ.ಮಹೇಶ ನಡೆಸಿಕೊಡಲಿದ್ದಾರೆ.
ಆಗಮಿಸುವವರೆಲ್ಲರೂ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.