ಶಿರಸಿ: ಇಲ್ಲಿಯ ಹುಬ್ಬಳ್ಳಿ ರಸ್ತೆಯ ಹುಲದೇವನಸರ ಘಟ್ಟದ ಬಳಿ ಮಾರುತಿ ಆಲ್ಟೋ ಮತ್ತು ಇಕೋ ಕಾರ್ ಗಳ ನಡಿವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಮಕ್ಕಳು ಸೇರಿದಂತೆ ಹಲವರಿಗೆ ಗಂಭೀರ ಗಾಯಗಳಾಗಿದೆ ಎಂದು ತಿಳಿದುಬಂದಿದೆ.
ಹುಬ್ಬಳ್ಳಿಯೆಡೆಗೆ ಸಾಗುತ್ತಿದ್ದ ಆಲ್ಟೋ ಮತ್ತು ಎದುರಿನಿಂದ ಬಂದ ಇಕೋ ಕಾರ್ ನಡುವೆ ಅಪಘಾತ ನಡೆದಿದ್ದು, ಡಿಕ್ಕಿಯಾದ ರಭಸಕ್ಕೆ ಇಕೋ ರಸ್ತೆಯಂಚಿನ ಗಟಾರದಲ್ಲಿ ಪಲ್ಟಿಯಾಗಿ ಬಿದ್ದಿದೆ. ಮಾರುತಿ ಆಲ್ಟೋ ಕಾರ್ ಕಾನಸೂರಿನ ನಿವಾಸಿಯವರದ್ದು ಎಂದು ತಿಳಿದುಬಂದಿದೆ.