ಕುಮಟಾ: ತಾಲೂಕಿನಾದ್ಯಂತ ಸಂಚರಿಸುವ ಸಾರಿಗೆ ಬಸ್ ಮತ್ತು ರಿಕ್ಷಾಗಳ ಮೇಲೆ ಕುಮಟಾ ಪೊಲೀಸ್ ಠಾಣೆಯ ಅಧಿಕಾರಿಗಳು 112 ಸಹಾಯವಾಣಿಯ ಮಾಹಿತಿ ಪತ್ರವನ್ನು ಅಂಟಿಸುವ ಮೂಲಕ ಸಹಾಯವಾಣಿ-ನಿಮ್ಮ ಮಿತ್ರ 24×7 ರ ಬಳಕೆ ಮತ್ತು ಕಾರ್ಯ ವಿಧಾನದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.
ಬಸ್ ನಿಲ್ದಾಣದಲ್ಲಿ ಸಿ.ಪಿ.ಐ.ಶಿವಪ್ರಕಾಶ ನಾಯ್ಕ, ಪಿ.ಎಸ್.ಐ.ಗಳಾದ ಆನಂದಮೂರ್ತಿ, ರವಿ ಗುಡ್ಡಿ ಹಾಗೂ ಕುಮಟಾ ಪೊಲೀಸ್ ಠಾಣಾ ಸಿಬ್ಬಂದಿಗಳು 112 ಸಹಾಯವಾಣಿಯ ಪ್ರಚಾರ ಪತ್ರಗಳನ್ನು ಬಸ್ ಮತ್ತು ರಿಕ್ಷಾಗಳಿಗೆ ಅಂಟಿಸಿ, ತುರ್ತು ಸಂದರ್ಭದಲ್ಲಿ ಕರೆ ಮಾಡುವಂತೆ ತಿಳಿಸಿದರು. ಅಲ್ಲದೇ, ಇಆರ್‍ಎಸ್ ವಾಹನ ಕಾರ್ಯ ವೈಖರಿಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪೊಲೀಸ್ ಠಾಣೆಯ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಸಾರಿಗೆ ಘಟಕದ ನೌಕರರು, ರಿಕ್ಷಾ ಚಾಲಕ, ಮಾಲಕರು ಹಾಗೂ ಸಾರ್ವಜನಿಕರು ಇದ್ದರು.