• Slide
  Slide
  Slide
  previous arrow
  next arrow
 • SSLC ಫಲಿತಾಂಶ; ಶಿರಸಿ ಸರ್ಕಾರಿ ಉರ್ದು ಶಾಲೆ ವಿದ್ಯಾರ್ಥಿನಿಯ ಸಾಧನೆ

  300x250 AD

  ಶಿರಸಿ: ಪ್ರಾಥಮಿಕ ಶಾಲೆಯಿಂದ ಉರ್ದು ಮಾಧ್ಯಮದಲ್ಲಿ ಓದಿ ಪ್ರೌಢಶಾಲೆಯಿಂದ ಇಂಗ್ಲಿಷ್ ಮಾಧ್ಯಮ ಆಯ್ಕೆ ಮಾಡಿಕೊಂಡ ಶಿರಸಿಯ ಉರ್ದು ಸರ್ಕಾರಿ ಪ್ರೌಡಶಾಲೆಯ ವಿದ್ಯಾರ್ಥಿನಿ ಖದೀಜತುಲ್ ಕುಬ್ರಾ 97.12% ಅಂಕ ಗಳಿಸುವ ಮೂಲಕ ಶಾಲೆಯ ಇತಿಹಾಸದಲ್ಲೇ ಅತ್ಯಧಿಕ ಅಂಕ ಪಡೆದು ದಾಖಲೆ ನಿರ್ಮಿಸಿದ್ದಾಳೆ.

  300x250 AD


  ಸಿದ್ದಾಪುರ ತಾಲೂಕಿನ ಹೆರೂರಿನ ಬಡ ಕುಟುಂಬದ ಕುಡಿಯಾಗಿರುವ ಖದೀಜತುಲ್ ಕೊರೊನಾದಿಂದ ಬಸ್ಸಿನ ಸಮಸ್ಯೆ ಇದ್ದಾಗ ಪಾಲಕರ ಪೆÇ್ರೀತ್ಸಾಹದಿಂದಾಗಿ ಹೆರೂರಿನಿಂದ ನಿತ್ಯ 60 ರು ಖರ್ಚು ಮಾಡಿ ಶಾಲೆಗೆ ಬಂದು ಆನ್ ಲೈನ್ ತರಗತಿಯಲ್ಲಿ ಪಾಲ್ಗೊಂಡು ಶಿಕ್ಷಕರ ಸಲಹೆಗಳನ್ನು ಚಾಚು ತಪ್ಪದೇ ಪಾಲಿಸಿ ಉನ್ನತ ಸಾಧನೆ ಮಾಡಿದ್ದಾಳೆ. 625ಕ್ಕೆ 607 ಅಂಕ ಗಳಿಸುವ ಮೂಲಕ ಶಿರಸಿಯ ಉರ್ದು ಸರ್ಕಾರಿ ಪ್ರೌಢಶಾಲೆಯಲ್ಲಿ ಇತಿಹಾಸ ಬರೆದಿದ್ದಾಳೆ. ಈಕೆಯ ಸಾಧನೆಗೆ ಶಾಲಾಭಿವೃದ್ಧಿ ಅಧ್ಯಕ್ಷರು, ಸದಸ್ಯರು, ಶಿಕ್ಷಕರು ಹಾಗೂ ಹಿತೈಷಿಗಳು ಅಭಿನಂದನೆ ಸಲ್ಲಿಸಿದ್ದಾರೆ.

  Share This
  300x250 AD
  300x250 AD
  300x250 AD
  Leaderboard Ad
  Back to top