• Slide
    Slide
    Slide
    previous arrow
    next arrow
  • ಆ.15 ಕ್ಕೆ ಜ್ಞಾನ ವಿಜ್ಞಾನ ಸತ್ರ ಮಾಲಿಕೆ ಕಾರ್ಯಕ್ರಮ

    300x250 AD


    ಕುಮಟಾ: ತಾಲೂಕಿನ ಗೋಕರ್ಣದ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ವತಿಯಿಂದ ಹಮ್ಮಿಕೊಳ್ಳಲಾದ ಜ್ಞಾನ ವಿಜ್ಞಾನ ಚಿಂತನ ಸತ್ರ ಮಾಲಿಕೆಯ 6 ನೆಯ ಕಾರ್ಯಕ್ರಮವನ್ನು ಆ.15 ಸ್ವಾತಂತ್ರ್ಯ ದಿನಾಚರಣೆಯಂದು ಮಧ್ಯಾಹ್ನ 11-45 ಕ್ಕೆ ಹಮ್ಮಿಕೊಳ್ಳಲಾಗಿದೆ.

    ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರ ಭಾರತೀ ಮಹಾ ಸ್ವಾಮೀಜಿಯವರು ದಿವ್ಯ ಸಾನ್ನಿಧ್ಯ ವಹಿಸಲಿರುವ ಕಾರ್ಯಕ್ರಮದಲ್ಲಿ ಕಾನ್ಪುರ ಐಐಟಿಯಲ್ಲಿ ಎಂಟೆಕ್ ಪದವಿ ಪಡೆದು ಅಮೆರಿಕದ ಉತಹ್ ವಿವಿಯಲ್ಲಿ ಡಾಕ್ಟರೇಟ್ ಪದವಿ ಪಡೆದ ವಿಶ್ವದ ಖ್ಯಾತ ಸಾಫ್ಟ್‍ವೇರ್ ಇಂಜಿನಿಯರ್ ಹಾಗೂ ಪುಣೆ ಎಂಐಟಿ ಸ್ಕೂಲ್ ಆಫ್ ವೇದಿಕ್ ಸೈನ್ಸಸ್‍ನ ಡೀನ್ ಡಾ.ಸಾಯಿ ರಾಮಕೃಷ್ಣ ಸುಸಾರ್ಲಾ ಅವರು ವಿಜ್ಞಾನ ಮತ್ತು ಶಾಸ್ತ್ರ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಇವತು ಸ್ವತಃ ಸಾಫ್ಟ್‍ವೇರ್ ಇಂಜಿನಿಯರ್ ಆಗಿದ್ದು, ಸಂಸ್ಕೃತ ಮತ್ತು ಶಾಸ್ತ್ರಗಳ ಬಗ್ಗೆ ಆಳವಾದ ಅಧ್ಯಯನ ಮಾಡಿ, ಶಾಸ್ತ್ರದಲ್ಲಿರುವ ಸತ್ಯಗಳನ್ನು ಆಧುನಿಕ ಜಗತ್ತಿಗೆ ಹೇಗೆ ಬಳಸಿಕೊಳ್ಳಬಹುದು ಎಂಬ ಬಗ್ಗೆ ಸವಿಸ್ತಾರವಾಗಿ ಮಾತನಾಡಲಿದ್ದಾರೆ.

    300x250 AD

    ಆಗಸ್ಟ್ 15 ರಂದು ಬೆಳಿಗ್ಗೆ 11.45 ರಿಂದ ಝೂಮ್ ಮೀಟಿಂಗ್‍ನಲ್ಲಿ ಈ ಆನ್‍ಲೈನ್ ವಿಚಾರ ಸಂಕಿರಣ ನಡೆಯಲಿದ್ದು, ವಿದ್ಯಾ ಪರಿಷತ್ ಅಧ್ಯಕ್ಷ ಎಂ.ಆರ್.ಹೆಗಡೆ, ಕಾರ್ಯದರ್ಶಿ ನೀಲಕಂಠ ಯಾಜಿ, ಪಾರಂಪರಿಕ ವಿಭಾಗದ ಪ್ರಾಚಾರ್ಯ ಸತ್ಯನಾರಾಯಣ ಶರ್ಮಾ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ಈ ವಿಚಾರಸಂಕಿರಣದಲ್ಲಿ ಪಾಲ್ಗೊಳ್ಳಲು ಸಾರ್ವಜನಿಕರಿಗೆ ಮುಕ್ತ ಅವಕಾಶವಿದ್ದು, ಝೂಮ್ ಮೀಟಿಂಗ್ ಐಡಿ: 91232939532. ಪಾಸ್‍ಕೋಡ್: 179719 ಸೇರ್ಪಡೆಗೊಳ್ಳಬಹುದಾಗಿದೆ ಎಂದು ಎಂದು ವಿದ್ಯಾ ಪರಿಷತ್ ಉಪಾಧ್ಯಕ್ಷ ಮರುವಳ ನಾರಾಯಣ ಭಟ್ಟ ತಿಳಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top