• first
    second
    third
    previous arrow
    next arrow
  • ನಾಗರ ಮೂರ್ತಿಗೆ ಹಾಲೆರೆದು ಪೂಜೆ; ಭಕ್ತಿಯಿಂದ ಹಬ್ಬದಾಚರಣೆ

    300x250 AD

    ಕುಮಟಾ: ತಾಲೂಕಿನ ವಿವಿಧ ಕಡೆಗಳಲ್ಲಿ ಕೋವಿಡ್ ನಿಯಮಾನುಸಾರ ನಾಗರ ಪಂಚಮಿ ಹಬ್ಬವನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಮುಂಜಾನೆಯಿಂದಲೇ ಭಕ್ತರು ನಾಗರ ಮೂರ್ತಿಗೆ ಹಾಲೆರೆಯುವ ಮೂಲಕ ವಿಶೇಷ ಪೂಜೆ ಸಲ್ಲಿಸಿ, ಪುನೀತರಾದರು.

    ನಾಗರ ಪಂಚಮಿಯು ಅಪ್ಪಟ ಮಹಿಳೆಯರ ಹಬ್ಬವಾಗಿದ್ದು, ಶ್ರಾವಣ ಮಾಸದ ಮೊದಲ ಹಬ್ಬವೂ ಆಗಿದೆ. ಶ್ರಾವಣ ಮಾಸದ ಆರಂಭದಲ್ಲಿಯೇ ಬರುವ ನಾಗರ ಪಂಚಮಿಯು, ಮುಂಬರುವ ಎಲ್ಲ ಹಬ್ಬಗಳಿಗೂ ಆದಿಯಾಗಿದ್ದು, ಇದರ ಆಚರಣೆಯಲ್ಲಿ ಪ್ರಕೃತಿಯ ಆರಾಧನೆ ಇದೆ ಎನ್ನುತ್ತಾರೆ ಪೂರ್ವಜರು.

    300x250 AD

    ಮಹಿಳೆಯರು ಹೊಸ ಬಟ್ಟೆಗಳನ್ನು ತೊಟ್ಟು ಕುಟುಂಬ ಸಮೇತರಾಗಿ ಊರಿನ ನಾಗ ದೇವಾಲಯ ಹಾಗೂ ಸನ್ನಿಧಿಗೆ ತೆರಳಿ ನಾಗರ ಮೂರ್ತಿಗೆ ಹಾಲೆರೆದು, ವಿಶೇಷ ಪೂಜೆ ಸಲ್ಲಿಸಿದರು. ನಾಗರ ಪೂಜೆಯ ಭಾಗವಾಗಿ ಕಲ್ಲುಗಳಿಗೆ ಎಳನೀರು ಹಾಗೂ ಹಾಲಿನಿಂದ ಅಭಿಷೇಕವನ್ನು ಮಾಡಲಾಯಿತು. ಅರಿಶಿಣದ ಎಲೆಗಳಿಂದ ಪಾತೋಳಿ ಎನ್ನುವ ಸಿಹಿ ಗಜ್ಜಾಯ ಹಾಗೂ ಉತ್ತರ ಕನ್ನಡದ ವಿಶೇಷ ಎಂಬಂತೆ, ನಾಗನಿಗೆ ಉಪ್ಪು ಹಾಕದ ಚಪ್ಪೆ ಅಕ್ಕಿರೊಟ್ಟಿಯ ನೈವೇದ್ಯ ಇಟ್ಟು ಪೂಜೆ ಸಲ್ಲಿಸಲಾಯಿತು.

    ನಾಗರ ಪಂಚಮಿ ಹಿನ್ನೆಲೆಯಲ್ಲಿ ನೂರಾರು ಜನರು ಮುಂಜಾನೆಯಿಂದಲೇ ನಾಗರ ದೇವಾಲಯಗಳಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದು, ಕೊರೊನಾ ಮೂರನೇ ಅಲೆಯ ಭೀತಿಯ ನಡುವೆಯೂ ಜನ ಭಕ್ತಿ ಭಾವದಿಂದ ಪೂಜೆ ಸಲ್ಲಿಸಿ, ಪುನೀತರಾದರು

    Share This
    300x250 AD
    300x250 AD
    300x250 AD
    Leaderboard Ad
    Back to top