ಕಾರವಾರ: ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗುತ್ತಿರುವ ಸಂಭ್ರಮದಲ್ಲಿ ಈ ಸಲ’ಆಜಾದಿ ಕಾ ಅಮೃತ ಮಹೋತ್ಸವ’ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನೌಕಾಪಡೆಯ ವತಿಯಿಂದ ಕಾರವಾರದ ಅಂಜುದೀವ್ ದ್ವೀಪದಲ್ಲಿ ಧ್ವಜಾರೋಹಣ ಮಾಡಲಾಯಿತು.
ಭಾರತೀಯ ನೌಕಾಪಡೆಯ ವತಿಯಿಂದ ದೇಶದಾದ್ಯಂತ 100 ದ್ವೀಪಗಳಲ್ಲಿ ಧ್ವಜಾರೋಹಣ ನಡೆಸಲಾಗುತ್ತಿದ್ದು ಶುಕ್ರವಾರ ಕಾರವಾರದ ಅಂಜುದೀವ್ ದ್ವೀಪದಲ್ಲಿ ಫ಼್ಲಾಗ್ ಆಫ಼ೀಸರ್ ಮಹೇಶ್ ಸಿಂಗ್ ರ ಉಪಸ್ಥಿತಿಯಲ್ಲಿ ಧ್ವಜಾರೋಹಣ ಮಾಡಲಾಯಿತು.
ಈ ಸಂದರ್ಭದಲ್ಲಿ ಭಾರತೀಯ ರಕ್ಷಣಾ ವ್ಯವಸ್ಥೆಯ ದೃಷ್ಟಿಯಿಂದ ಅಂಜುದೀವ್ ದ್ವೀಪದ ಪ್ರಾಮುಖ್ಯತೆಯನ್ನು ವಿವರಿಸಿ ನೌಕಾಸೇನೆಯ ಬ್ಯಾಂಡ್ ನಿಂದ ರಾಷ್ಟ್ರಗೀತೆ ನುಡಿಸಿ ಧ್ವಜವಂದನೆ ಸಲ್ಲಿಸಲಾಯಿತು.