• Slide
    Slide
    Slide
    previous arrow
    next arrow
  • ಕಾರ್ಮಿಕ ಇಲಾಖೆಯಲ್ಲಿ ಹೊಸ ಬಿಲ್ ಮಂಡನೆಗೆ ಸಿದ್ಧತೆ; ಸಚಿವ ಹೆಬ್ಬಾರ್

    300x250 AD

    ಯಲ್ಲಾಪುರ: ಕಾರ್ಮಿಕ ಇಲಾಖೆಯಲ್ಲಿ ಅತೀ ಶೀಘ್ರದಲ್ಲಿ ಹೊಸ ರೀತಿಯ ಬಿಲ್ ಮಂಡನೆ ಮಾಡಿ ದೊಡ್ಡ ಮಟ್ಟದ ಬದಲಾವಣೆ ಮಾಡಲು ಸಿದ್ಧರಾಗಬೇಕೆಂದು ಸಚಿವ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ.


    ಆಟೋ ರಿಕ್ಷಾ, ಟ್ರಕ್, ಬಸ್ ಸೇರಿದಂತೆ ಎಲ್ಲಾ ಚಾಲಕರು, ಹಾಗು ತಾಂತ್ರಿಕ ಸಿಬ್ಬಂದಿ ಸಂಬಂಧಪಟ್ಟಂತೆ ಹೊಸ ಬಿಲ್ ಜಾರಿಗೆ ತರಲು ಉದ್ದೇಶಿಸಲಾಗಿದೆ. ಮೃತರಾದರೆ 5 ಲಕ್ಷ ನೀಡುವುದು ಸೇರಿದಂತೆ ಹಲವು ಸೌಲಭ್ಯಗಳು ಹೊಸ ಬಿಲ್ ನಲ್ಲಿ ಇರಲಿದೆ. ಬರುವ ಅಧಿವೇಶನದಲ್ಲಿ ಹೊಸ ಬಿಲ್ ತರಲಾಗುವುದು. ಒಂದು ಕಾಲಕ್ಕೆ ನಾನು ಚಾಲಕನಾಗಿ ಕೆಲಸ ಮಾಡಿದ್ದೆ ನನಗೆ ಚಾಲಕನ ಸಂಕಷ್ಟ ಗೊತ್ತಿದೆ. ಅದಕ್ಕಾಗಿ ಹೊಸ ಬಿಲ್ ತರಲಾಗುತ್ತಿದೆ ಎಂದು ಹೇಳಿದರು.

    300x250 AD


    ಕಾರ್ಮಿಕ ಇಲಾಖೆಯ ಸಂಬಂಧಪಟ್ಟಂತೆ ನೀಡುತ್ತಿರುವ ವಿವಿಧ ಸಹಾಯ ಧನ ದುಪ್ಪಟ್ಟು ಮಾಡಲು ತೀರ್ಮಾನ ಮಾಡಲಾಗಿದೆ. ಕಾರ್ಮಿಕ ಇಲಾಖೆ ಸಂಬಂಧಪಟ್ಟಂತೆ ವಿಜಲೆನ್ಸ್ ಸೆಲ್ ಮಾಡಲಾಗುತ್ತದೆ. ವಲಸೆ ಕಾರ್ಮಿಕರಿಗೆ ಪ್ರಮುಖ ಜಿಲ್ಲೆಯಲ್ಲಿ ವಸತಿ ಸಮುಚ್ಚಯ ಕಟ್ಟಲು ತೀರ್ಮಾನ ಮಾಡಲಾಗಿದೆ. ಅಸಂಘಟಿತ ವಲಯಕ್ಕೆ ಮಾಧ್ಯಮ ಸೇರಿದಂತೆ ಹಲವು ವರ್ಗಗಳನ್ನು ಸೇರಿಸುವಂತೆ ಸಿಎಂಗೆ ಮನವಿ ಮಾಡಲಾಗುವುದು ಎಂದು ಸಚಿವ ಶಿವರಾಮ್ ಹೆಬ್ಬಾರ್ ಹೇಳಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top