ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ತಾಲೂಕಿನ ಸೋಂದಾ ಕೋಣೆಸರದ ಪರಮೇಶ್ವರ ಹೆಗಡೆ ಅವರು ಕೇಂದ್ರ ಗೃಹ ಸಚಿವಾಲಯ ನೀಡುವ ಶ್ರೇಷ್ಠ ‘ತನಿಖಾ ಪದಕ’ಕ್ಕೆ ಭಾಜನರಾಗಿದ್ದಾರೆ.
ಪರಮೇಶ್ವರ ಹೆಗಡೆ ಅವರು ಪ್ರಸ್ತುತ ಮಂಗಳೂರು ಉಪವಿಭಾಗದ ಡಿವೈಎಸ್ಪಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರಿಗೆ ಕಳೆದ ವರ್ಷ ರಾಷ್ಟ್ರಪತಿ ಪದಕ ಕೂಡ ಲಭಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ರಾಷ್ಟ್ರದಲ್ಲಿ ಅಪರಾಧ ಪ್ರಕರಣಗಳ ತನಿಖೆ ವೇಳೆ ಉತ್ತಮ ಸೇವೆ ಸಲ್ಲಿಸುವ ತನಿಖಾಧಿಕಾರಿಗಳಿಗೆ ಕೇಂದ್ರ ಗೃಹ ಸಚಿವಾಲಯ ನೀಡುವ ಶ್ರೇಷ್ಠ ಪದಕವಾಗಿದ್ದು, ರಾಜ್ಯದ 6 ಮಂದಿ ಆಯ್ಕೆಯಾಗಿದ್ದಾರೆ. ಉಳಿದ 5 ಅಧಿಕಾರಿಗಳ ಪೈಕಿ ಬಿಡಿಎ ಡಿವೈಎಸ್ಪಿ ಸಿ, ಬಾಲಕೃಷ್ಣ, ಕೆಐಎ ಎಸ್‍ಐಟಿ ಮನೋಜ್ ಎನ್. ಹೂವಳೆ, ದಾವಣಗೆರೆ ಜಿಲ್ಲೆ ಹೊನ್ನಾಳಿ ಇನ್‍ಸ್ಪೆಕ್ಟರ್ ಟಿ.ವಿ, ದೇವರಾಜ್ ಹಾಗೂ ಹಳೇ ಹುಬ್ಬಳ್ಳಿ ಠಾಣೆ ಇನ್‍ಸ್ಪೆಕ್ಟರ್’ ಶಿವಪ್ಪ ಶೆಟ್ಟಪ್ಪ ಕಮಟಗಿ ಅವರಿಗೆ ಪದಕ ಲಭಿಸಿದೆ. ದೇಶಾದ್ಯಂತ ಪೆÇಲೀಸ್ ಇಲಾಖೆ, ಎನ್‍ಐಎ ಮತ್ತು ಸಿಬಿಐ ಸೇರಿದಂತೆ 153 ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಶ್ರೇಷ್ಠ ತನಿಖಾ ಪದಕ ಪ್ರದಾನಿಸಲಾಗಿದೆ.