ಶಿರಸಿ: ಕರ್ನಾಟಕ ರಾಜ್ಯದ ಕೃಷಿ ಪತ್ತಿನ ಸಹಕಾರ ಸಂಘಗಳು ಮತ್ತು ಪಿ.ಎಲ್.ಡಿ ಬ್ಯಾಂಕಿನ ಬಡ್ಡಿ ರಿಯಾಯತಿ ಯೋಜನೆಯನ್ನು 2022 ಮಾ.31 ರ ವರೆಗೂ ಮುಂದುವರೆಸುವ ಂತೆ ಕೋರಿ ತಾಲೂಕಿನ ದಾಸನಕೊಪ್ಪ, ರಂಗಾಪುರದ ಸಮೃದ್ಧಿ ಪ್ರತಿಷ್ಠಾನದ ಜಯಪುತ್ರ ಎಲ್ ಜಿ ಸಹಾಯಕ ಕಮೀಷನರ್ ಮೂಲಕ ಸಿಎಂ ಬಸವರಾಜ ಬೊಮ್ಮಾಯಿಗೆ ಮನವಿ ನೀಡಿದ್ದಾರೆ.
ಕರ್ನಾಟಕ ರಾಜ್ಯದ ಕೃಷಿ ಪತ್ತಿನ ಸಹಕಾರಿ ಸಂಘಗಳು ಮತ್ತು ಪಿ.ಎಲ್.ಡಿ ಬ್ಯಾಂಕಿನಲ್ಲಿ ಕೃಷಿ ಮಾಧ್ಯಮಿಕ ಸಾಲ ತೆಗೆದುಕೊಂಡ ರೈತರು ಕೋವಿಡ್-19 ರ ತೀವೃತೆಯಿಂದಾಗಿ ಸರ್ಕಾರ ಘೋಷಿಸಿದ ಲಾಕ್‍ಡೌನ್ ದಿಂದಾಗಿ ರೈತ ಸಮುದಾಯಕ್ಕೆ ದೊಡ್ಡ ಪ್ರಮಾಣದಲ್ಲಿ ಆರ್ಥಿಕವಾಗಿ ನಷ್ಟ ಉಂಟಾಗಿದೆ. ಇದರಿಂದಾಗಿ ರೈತರು ತೆಗೆದುಕೊಂಡಿರುವ ಕೃಷಿ ಮಾಧ್ಯಮಿಕ ಸಾಲ ಕಟ್ ಬಾಕಿ ಆಗುತ್ತಿದ್ದು, ಸದ್ರಿ ಸಾಲಗಳ ಮೇಲೆ ಪೂರ್ಣ ಪ್ರಮಾಣದ ಬಡ್ಡಿ ತುಂಬ ಬೇಕಾಗುತ್ತದೆ. ಆದರೆ ಲಾಕ್‍ಡೌನ್ ನಿಂದಾದ ತೊಂದರೆಯಿಂದಾಗಿ ಹಾಗೂ ಈ ಬಾರಿ ಅಧಿಕ ಪ್ರಮಾಣದ ಮಳೆಯಿಂದ ದೊಡ್ಡ ಪ್ರಮಾಣದ ಬೆಳೆ ಹಾನಿ ಹಾಗೂ ಬೆಲೆಯಲ್ಲಾದ ಏರಿಳಿತದಿಂದಾಗಿ ರೈತರು ತೀರಾ ಸಂಕಷ್ಟದಲ್ಲಿದ್ದಾರೆ.
ಈ ಕಾರಣಗಳಿಂದಾಗಿ ತಾವು ಕರ್ನಾಟಕ ಸರ್ಕಾರದ ಮುಖ್ಯ ಮಂತ್ರಿಗಳಾಗಿ, ರೈತರ ಬಗ್ಗೆ ಅಪಾರ ಕಾಳಜಿ ಹೊಂದದವರಾಗಿದ್ದು, ರೈತರ ಕಷ್ಟವನ್ನು ತೀರಾ ಹತ್ತಿರದಿಂದ ಬಲ್ಲವರಾಗಿರುತ್ತೀರಿ, ಕಾರಣ ದಯಾಳುಗಳು ರೈತರ ಕಳಕಳಿಯ ವ್ಯಕ್ತಿಯಾಗಿರುವ ತಾವು ಸದ್ರಿ ಬಡ್ಡಿ ರಿಯಾಯಿತಿ ಆದೇಶವನ್ನು ಮಾರ್ಚ 31 2022 ರವರೆಗೂ ಅವಧೀ ಮೀರಿದ ಸಾಲಗಳ ಮೇಲಿನ ಬಡ್ಡಿ ರಿಯಾಯಿತಿ ಆದೇಶವನ್ನು ಮುಂದುವರೆಸಿ ರಾಜ್ಯದ ರೈತ ವರ್ಗಕ್ಕೆ ಹೆಚ್ಚಿನ ಅನುಕೂಲ ಮಾಡಿಕೊಡಬೇಕಾಗಿ ವಿನಂತಿಸಿದ್ದಾರೆ.