• Slide
  Slide
  Slide
  previous arrow
  next arrow
 • ವಿದ್ಯುತ್ ಖಾಸಗೀಕರಣ ನೀತಿ ವಿರೋಧಿಸಿ ತಹಶೀಲ್ದಾರರಿಗೆ ಮನವಿ

  300x250 AD

  ಮುಂಡಗೋಡ: ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ತಾಲೂಕು ಸಂಘದವರು ವಿದ್ಯುತ್ ಖಾಸಗೀಕರಣ ನೀತಿಯನ್ನು ಹಾಗೂ ಪ್ರಧಾನಮಂತ್ರಿ ಫಸಲ್‍ಬಿಮಾ ಯೋಜನೆಯ ತಾರತಮ್ಯವನ್ನು ಖಂಡಿಸಿ ಬುಧವಾರ ತಹಶೀಲ್ದಾರ ಶ್ರೀಧರ ಮುಂದಲಮನಿಗೆ ಮನವಿ ಸಲ್ಲಿಸಿದರು.


  ಭಾರತ ಸರಕಾರ ತಂದಿರುವ ಮೂರು ಕೃಷಿ ಕಾನೂನುಗಳ ಪೈಕಿ ವಿದ್ಯುಚ್ಛಕ್ತಿ ಕಾಯ್ದೆ ಒಂದಾಗಿದೆ. ವಿದ್ಯುಚ್ಛಕ್ತಿಯವನ್ನು ಭಾರತ ಸರ್ಕಾರ ಕಾರ್ಪೋರೆಟ್ ಕಂಪನಿಗಳಿಗೆ ಕೊಡುವಂತಹ ತೀರ್ಮಾನ ಕೈಗೊಂಡಿದ್ದಾರೆ. ಇದರಿಂದ ದೇಶದ ಕೃಷಿ ವಲಯದ ಮೇಲಾಗುವ ದುಷ್ಟಪರಿಣಾಮ ಖಚಿತ. ಕೃಷಿಯು ಲಾಭದಾಯಕ ವಲ್ಲದ ಕಾರಣಕ್ಕೆ ಕೃಷಿಯಿಂದ ರೈತರನ್ನು ಹೊರಹಾಕಿ ವಿದ್ಯುಚ್ಛಕ್ತಿ, ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳನ್ನು ರೈತರಿಂದ ಕೈ ತಪ್ಪಿಸಿ ಅದನ್ನು ದುಬಾರಿಗೊಳಿಸಲು ಸಜ್ಜಾಗಿದೆ. ಕೇಂದ್ರ ಸಕಾರ ಜಾರಿಗೆ ತರುತ್ತಿರುವ ಈ ನಿರ್ಧಾರವನ್ನು ರೈತ ಸಂಘ ಖಂಡಿಸುತ್ತದೆ.

  300x250 AD


  ತಾಲೂಕಿನಾದ್ಯಂತ ಹಲವು ವರ್ಷಗಳಿಂದ ರೈತರು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ ಬೆಳೆವಿಮೆ ತುಂಬಾತ್ತಾ ಬಂದಿದ್ದಾರೆ. ಆದರೆ ಬೆಳೆ ಹಾನಿಯ ಸಂದರ್ಭದಲ್ಲಿ ರೈತರಿಗೆ ಸಿಗಬೇಕಾದ ಬೆಳೆವಿಮಾ ಯೋಜನೆಯು ಮುಂಡಗೋಡ ತಾಲೂಕಿನಾದ್ಯಂತ ಸರಿಯಾದ ರೀತಿಯಲ್ಲಿ ದೊರಕದೇ ಇರುವುದರಿಂದ ಬೆಳೆಹಾನಿ ಸಂಭವಿಸಿ ರೈತರು ಸಂಕಷ್ಟದಲ್ಲಿದ್ದಾರೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಬೆಳೆಹಾನಿ ಪರಿಹಾರವು ವಿಂಗಡಣೆಯಾಗುತ್ತಿದ್ದು. ಕೆಲವು ಗ್ರಾ.ಪಂ ವ್ಯಾಪ್ತಿಯ ರೈತರಿಗೆ ಇದುವರೆಗೂ ಪರಿಹಾರ ದೊರೆಕಿಲ್ಲ. ಆದ್ದರಿಂದ ತಾಲೂಕಾ ದಂಡಾಧಿಕಾರಿಗಳು ರೈತರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.


  ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ತಾಲೂಕು ಸಂಘದ ಅಧ್ಯಕ್ಷ ಪೀರಜ್ಜ ಸಾಗರ, ಉಪಾಧ್ಯಕ್ಷ ಗುರುರಾಯ ರಾಯ್ಕರ ಮುಖಂಡರಾದ ನಿಂಗಪ್ಪ ಕುರಬರ, ಶಿವಾನಂದ ಕುರಬರ, ಮಂಜುನಾಥ ಶೇಟ್, ರೂಪೇಶ ಚವ್ಹಣ, ಮಂಜು ಮೈಸೂರ, ಅರ್ಜುನ್ ಸಪ್ಪಣ್ಣನವರ, ಲಿಂಗರಾಜ ಕನ್ನೂರ, ಶೇಖಪ್ಪ ಹೊತ್ಕಣ್ಣನವರ, ಚನ್ನವೀರ ಹೊತ್ಕಣ್ಣನವರ, ಬಸಪ್ಪ ಕಂಬಾರ, ಹನಮಯಲ್ಲಾಪುರ, ಫಕ್ಕಿರೇಶ ಶೇರೆವಾಡ, ಮತ್ತು ಗಣಪತಿ ಇದ್ದರು.

  Share This
  300x250 AD
  300x250 AD
  300x250 AD
  Leaderboard Ad
  Back to top