ಮುಂಡಗೋಡ: ಪ್ರತಿ ವರ್ಷ ಹೀಗೆಯೇ ಜಲಾಶಯದ ಒಡಲು ತುಂಬುತ್ತಿರಲಿ ಎಂಬ ಉದ್ದೇಶದಿಂದ ಬಾಗಿನ ಅರ್ಪಿಸುವ ಕಾಯಕ ನಡೆಯುತ್ತಿದೆ. ರೈತರು ಜಲಾಶಯಗಳ ಸದುಪಯೋಗ ಮಾಡಿಕೊಳ್ಳಬೇಕು ಎಂದು ವಾಕರಸಾ ಸಂಸ್ಥೆ ಅಧ್ಯಕ್ಷ ವಿ.ಎಸ್.ಪಾಟೀಲ ಹೇಳಿದರು.
ತಾಲೂಕಿನ ಬಾಚಣಕಿ ಜಲಾಶಯಕ್ಕೆ ಬಾಗಿನ ಅರ್ಪಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು. ಅಂತರ್ಜಲ ಹೆಚ್ಚಾಗುವ ದೃಷ್ಟಿಯಿಂದ ಸರ್ಕಾರ ಈಗಾಗಲೆ ಸಾಕಷ್ಟು ಖರ್ಚು ಮಾಡಿ ಇಂಗು ಗುಂಡಿಗಳ ನಿರ್ಮಾಣ ಮಾಡಿದೆ. ನಿರುದ್ಯೋಗ ಸಮಸ್ಯೆ ಹೆಚ್ಚಾಗಿರುವುದರಿಂದ ರೈತರ ಮಕ್ಕಳು ಭೂಮಿಯಲ್ಲಿ ಹೆಚ್ಚು-ಹೆಚ್ಚು ಉತ್ಪನ್ನ ಬೆಳೆಯಬೇಕು. ಅಭಿವೃದ್ಧಿ ನಿರಂತರವಾಗಿರಬೇಕು. ತಾಲೂಕಿನಲ್ಲಿ ರಾಮಕೃಷ್ಣ ಹೆಗಡೆ ಅವರು ನಿರ್ಮಾಣ ಮಾಡಿದ ಜಲಾಶಯಗಳಿಗೆ ಸಮರ್ಪಕವಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಆಗಿಲ್ಲ ಎಂದರು.
ಜಿ.ಪಂ. ಮಾಜಿ ಸದಸ್ಯ ಎಲ್.ಟಿ.ಪಾಟೀಲ ಮಾತನಾಡಿ ಹೆಣ್ಣು ಮಕ್ಕಳಿಗೆ ಹೇಗೆ ಸೀಮಂತ ಕಾರ್ಯ ಮಾಡುತ್ತೇವೆ ಹಾಗೆಯೇ ಜಲಾಶಯದ ತುಂಬಿದ ಒಡಲಿಗೆ ಬಾಗಿನ ಅರ್ಪಿಸುವುದು ಎಂದರು.
ಜಿ.ಪಂ. ಮಾಜಿ ಸದಸ್ಯ ರವಿಗೌಡ ಪಾಟೀಲ, ಗ್ರಾ.ಪಂ.ಅಧ್ಯಕ್ಷೆ ಅನ್ನಪೂರ್ಣಾ ಬೆಣ್ಣಿ, ಬಿ.ಕೆ.ಪಾಟೀಲ, ನಾಗಭೂಷಣ ಹಾವಣಗಿ, ದೇವು ಪಾಟೀಲ, ಪರಶುರಾಮ ತಹಸೀಲ್ದಾರ್, ಕೆಂಜೋಡಿ ಗಲಬಿ, ಬಸವರಾಜ ಸಂಗಮೇಶ್ವರ, ನಾಗರಾಜ ಬೆಣ್ಣಿ, ಲಕ್ಷ್ಮೀ ಪಾಟೀಲ, ಶಾಮಲಾ ಕುರಿಯವರ, ವೈ.ಪಿ.ಪಾಟೀಲ, ಡಿ.ಎಫ್.ಮಡ್ಲಿ, ಬ್ರಿಷ್ಟನಗೌಡ್ ಪಾಟೀಲ್, ಗಣೇಶ ಶಿಂಗನಳ್ಳಿ, ಕಲ್ಲಪ್ಪ ಸುಣಗಾರ, ಪಕ್ಕಿರೇಶ ತಾವರಗೇರಿ, ಸಹದೇವಪ್ಪ ನಡಗೇರಿ, ಮಂಜುನಾಥ ನಡಗೇರಿ, ದುರ್ಗಪ್ಪ ಬಂಡಿವಡ್ಡರ, ಮುಂತಾದವರು ಉಪಸ್ಥಿತರಿದ್ದರು.