Slide
Slide
Slide
previous arrow
next arrow

ಸುವಿಚಾರ

300x250 AD


ಯೋ ಯಮರ್ಥಂ ಪ್ರಾರ್ಥಯತೇ ತದರ್ಥಂ ಘಟತೇಪಿ ಚ
ಅವಶ್ಯಂ ತದವಾಪ್ನೋತಿ ನ ಚೇಚ್ಛ್ರಾಂತೋ ನಿವರ್ತತೇ ||

ಧ್ಯಾನಾದಿಗಳ ಮೂಲಕ ಸಾಮು ಮಾಡಿ ಒಂದು ಹದಕ್ಕೆ ಬಂದ ಮನಸಿಗೆ ಮಹತ್ತರವಾದ ಶಕ್ತಿಯಿರುತ್ತದೆ. ಅದೆಂದರೆ, ತಾನು ಇಚ್ಛಿಸಿದ್ದನ್ನು ಪಡೆಯುವಂಥದು. ಹಾಗಾಗಿ ಪಳಗಿದ ಮನಸುಳ್ಳ ಯಾರು ಯಾವುದಕ್ಕಾಗಿ ತೀವ್ರವಾಗಿ ಹಂಬಲಿಸುವರೋ, ಅದು ಅವರ ಬದುಕಿನಲ್ಲಿ ಸಂಭವಿಸುತ್ತದೆ. ಆದರೆ ಆ ಗುರಿಯ ಸಾಧನೆಗಾಗಿ ಅಥವಾ ದ್ರವ್ಯದ ಪ್ರಾಪ್ತಿಗಾಗಿ ಹೊರಟಮೇಲೆ ಮಧ್ಯೆ ಆಯಾಸವಾಯಿತೆಂದು, ಸಾಕು ಸಾಕೆನಿಸಿತೆಂದು ಹಿಡಿದ ಮಾರ್ಗದಿಂದ ಹಿಂದಕ್ಕೆ ಬರಬಾರದು. ಆ ದೃಢತೆಯಿದ್ದಲ್ಲಿ ವಸ್ತುವಿನ ಸಿದ್ಧಿಯೂ, ಕಾರ್ಯದ ಸಾಧನೆಯೂ ಆಗುತ್ತದೆ.
ಶ್ರೀ ನವೀನ ಗಂಗೋತ್ರಿ

300x250 AD
Share This
300x250 AD
300x250 AD
300x250 AD
Back to top