ಶಿರಸಿ: ವಯೋವೃದ್ಧ ನೋರ್ವ ಪಾಶ್ರ್ವವಾಯುಗೆ ಪೀಡಿತನಾಗಿ ಗುಣಮುಖರಾಗಿ ನಂತರ ಮತ್ತೆ ಬಿದ್ದು ಗಾಯಪಡಿಸಿಕೊಂಡಿದ್ದ. ಅದನ್ನೇ ಮನಸ್ಸಿ ಹಚ್ಚಿಕೊಂಡು ಮನೆಯ ಹತ್ತಿರ ಇರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಕಸ್ತೂರಬಾ ನಗರದ ಗಂಧದ ಕಾಂಪ್ಲೆಕ್ಸ್ ನಲ್ಲಿ ನಡೆದಿದೆ.
ರಾಮಚಂದ್ರ ನಾಗೇಶ್ ನವಲೂರು 78ವರ್ಷ ಎಂಬವರೇ ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ. ಕಳೆದೆರಡು ವರ್ಷಗಳ ಹಿಂದೆ ಇವರಿಗೆ ಪಾಶ್ರ್ವವಾಯು ಪೀಡಿತರಾಗಿ ಗುಣಮುಖರಾದವರು ಕಳೆದ ಮೂರು ತಿಂಗಳ ಹಿಂದೆ ಮನೆಯಲ್ಲೇ ಬಿದ್ದು ಕಾಲಿಗೆ ಗಾಯ ಮಾಡಿಕೊಂಡಿದ್ದರು. ಇದರಿಂದ ಮನನೊಂದು ಮನೆ ಹತ್ತಿರ ಇರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಕುರಿತು ಶಿರಸಿ ಹೊಸ ಮಾರುಕಟ್ಟೆ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪಿಎಸ್‍ಐ ಭೀಮಾಶಂಕರ ಸ್ಥಳ ಪರಿಶೀಲಿಸಿದ್ದು ರವೀಂದ್ರ ಆರ್. ನಾಯ್ಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.