• Slide
    Slide
    Slide
    previous arrow
    next arrow
  • ಕೃಷ್ಣಗದ್ದೆ ಬಸ್ ತಂಗುದಾಣ ಹಿಂಬದಿ ನೇಣು ಹಾಕಿದ ಸ್ಥಿತಿಯಲ್ಲಿ ವ್ಯಕ್ತಿ ಶವ ಪತ್ತೆ

    300x250 AD

    ಯಲ್ಲಾಪುರ: ತಾಲೂಕಿನ ಕಣ್ಣಿಗೇರಿ ಬಳಿಯ ಕೃಷ್ಣಗದ್ದೆ ಬಸ್ ತಂಗುದಾಣದ ಹಿಂಬದಿಯಲ್ಲಿ ಅಪರಿಚಿತ ವ್ಯಕ್ತಿಯೋರ್ವನ ಶವ ನೇಣು ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
    ಸುಮಾರು 35-40 ವರ್ಷದ ವ್ಯಕ್ತಿಯ ಶವ ಮರವೊಂದಕ್ಕೆ ನೇಣು ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಶವ ಕೊಳೆತು ಹೋಗಿದೆ. ಈತ 7-8 ದಿವಸಗಳ ಹಿಂದೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಅಂದಾಜಿಸಲಾಗಿದೆ.

    300x250 AD


    ಪಕ್ಕದಲ್ಲೇ ಚಪ್ಪಲಿ, ಬ್ಯಾಗ್, ರಗ್, ಟವೆಲ್ ಇತರ ಸಾಮಗ್ರಿಗಳು ಬಿದ್ದಿವೆ. ಗೋಧಿ ಬಣ್ಣ ಹೊಂದಿದ 5.5 ಅಡಿ ಎತ್ತರದ ವ್ಯಕ್ತಿ, ನೀಲಿ ಮತ್ತು ಬಿಳಿ ಬಣ್ಣದ ಅಂಗಿ, ಜೀನ್ಸ್ ಪ್ಯಾಂಟ್ ಧರಿಸಿದ್ದಾನೆ. ಈ ಕುರಿತು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತನ ಗುರುತು ಪತ್ತೆಗೆ ಪೆÇಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಈ ಚಹರೆಯ ವ್ಯಕ್ತಿಯ ವಾರಸುದಾರರು ಅಥವಾ ವ್ಯಕ್ತಿಯ ಗುರುತು ತಿಳಿದವರು ಯಲ್ಲಾಪುರ ಠಾಣೆಯನ್ನು ಸಂಪರ್ಕಿಸಲು ಪೆÇಲೀಸರು ಕೋರಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top