ಶಿರಸಿ: ಇಲ್ಲಿಯ ಪ್ರತಿಷ್ಟಿತ ಎಪಿಎಂಸಿ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಬನವಾಸಿಯ ಶಿವಕುಮಾರ ಗೌಡ ಹಾಗು ಉಪಾಧ್ಯಕ್ಷರಾಗಿ ಸವಿತಾ ಹೆಗಡೆ ಹುಳಗೋಳ ಅವಿರೋಧವಾಗಿ ಆಯ್ಕೆಯಾದರು.
ಸಾಮಾಜಿಕ ರಂಗದಲ್ಲಿ ಈಗಾಗಲೇ ಗುರುತಿಸಿಕೊಂಡಿರುವ ಸವಿತಾ ಹೆಗಡೆ ಕಳೆದ ಎರಡೂವರೆ ವರ್ಷಗಳ ಕಾಲ ಸದಸ್ಯೆಯಾಗಿ ಕಾರ್ಯನಿರ್ವಹಿಸಿದ್ದು, ಪ್ರಸ್ತುತ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಈ ಮೊದಲು ಇವರು ಭೈರುಂಬೆ ಪಂಚಾಯತದಲ್ಲಿ ಉಪಾಧ್ಯಕ್ಷೆಯಾಗಿಯೂ ಜವಾಬ್ದಾರಿ ನಿರ್ವಹಿಸಿದ್ದರು.
ಕಳೆದ ಕೊವಿಡ್ ಸಮಯದಲ್ಲಿ ಎಪಿಎಂಸಿ ಅಧ್ಯಕ್ಷರಾಗಿದ್ದ ವಿಶ್ವನಾಥ ಹೆಗಡೆ ಶೀಗೇಹಳ್ಳಿ ಎಪಿಎಂಸಿ ಹಮಾಲರಿಗೆ ಹಾಗು ಕಾರ್ಮಿಕರಿಗೆ ಕಿಟ್ ನೀಡಿ ಮಾನವೀಯತೆ ಮೆರೆದಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.