ಮುಂಡಗೋಡ: ಪಟ್ಟಣದ ಕೃಷಿ ಇಲಾಖೆಯಲ್ಲಿ ತಹಶೀಲ್ದಾರ ಶ್ರೀಧರ ಮುಂದಲಮನಿ ನೇತೃತ್ವದಲ್ಲಿ ರೈತರು ಮತ್ತು ಎರಡು ಖಾಸಗಿ ರಸಗೊಬ್ಬರ ಮಾರಾಟಗಾರರ ಜೊತೆ ಮಂಗಳವಾರ ಸಭೆ ನಡೆಸಿದರು.
ಪಟ್ಟಣದ ಖಾಸಗಿ ರಸಗೊಬ್ಬರ ಮಾರಾಟಗಾರದ ಮಹಾಲಕ್ಮೀ ಆಗ್ರೋ ಟ್ರೇಡರ್ಸ್ ಹಾಗೂ ಪ್ರಸನ್ನ ಆಗ್ರೋ ಟ್ರೇಡರ್ಸ್ ಅಂಗಡಿಗಳಲ್ಲಿ ಯೂರಿಯಾ ಗೊಬ್ಬರ ದಾಸ್ತಾನು ಇದ್ದರು ರೈತರಿಗೆ ನೀಡಿರಲಿಲ್ಲ ಹಾಗೂ ಎಂಆರ್‍ಪಿ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂದು ಆ.4 ರಂದು ರೈತರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
ಕೃಷಿ ಇಲಾಖೆ ಅಧಿಕಾರಿ 15 ದಿನ ಕಾಲ ಅಮಾನತ್ತಿನಲ್ಲಿಟ್ಟಿದ್ದರು ಏಕೆ ಮಾರಾಟ ಮಾಡಿದ್ದೀರಿ ಎಂದು ತಹಶೀಲ್ದಾರರು ಅಂಗಡಿಯವರಿಗೆ ಪ್ರಶ್ನಿಸಿದರು. ಇದಕ್ಕೆ, ಉತ್ತರಿಸಿದ ಅಂಗಡಿಯವರು ಆ ರೀತಿ ಯಾವುದೆ ಗೊಬ್ಬರವನ್ನು ನಾವು ಮಾರಾಟ ಮಾಡಿಲ್ಲ ಮತ್ತು ಅಧಿಕಾರಿಗಳ ಆದೇಶವನ್ನು ಉಲ್ಲಂಘಿಸಿಲ್ಲ ನಮ್ಮಲ್ಲಿ ದಾಸ್ತಾನು ಇರುವ ಯೂರಿಯಾ ಗೊಬ್ಬರವನ್ನು ಮಾರಾಟ ಮಾಡಲು ಅವಕಾಶ ಮಾಡಿ ಕೊಡಬೇಕು ಎಂದರು.
ರೈತರಿಗೂ ಯೂರಿಯಾ ಗೊಬ್ಬರದ ಅವಶ್ಯವಿದ್ದ ಕಾರಣ ರೈತರು ಹೇಳುವಂತೆ ಮತ್ತು ಅಂಗಡಿಯವರಿಗೂ ನಷ್ಟ ಆಗದಂತೆ ಸದ್ಯ ದಾಸ್ತಾನು ಇರುವ ಗೊಬ್ಬರ ಮಾರಾಟ ಮಾಡಲು ಒಂದು ದರವನ್ನು ನಿಗದಿ ಮಾಡಿ ಎಂದು ರೈತರಲ್ಲಿ ತಹಶೀಲ್ದಾರ ಕೇಳಿದರು. ರೈತರು ಮತ್ತು ಅಂಗಡಿಕಾರರ ಸಹಮತದಿಂದ ದಾಸ್ತನು ಇರುವ ಯೂರಿಯಾ ಗೊಬ್ಬರವನ್ನು ಒಂದು ಚೀಲಕ್ಕೆ 300ರೂ ರಂತೆ ಮಾರಾಟ ಮಾಡಲು ಸಭೆಯಲ್ಲಿ ನಿರ್ಣಯಿಸಿದರು.
ಆದರೆ ಸರಕಾರ ನಿಗದಿ ಪಡಿಸಿದ ಬೆಲೆಗಿಂತ ಅಧಿಕ ಬೆಲೆಗೆ ಮಾರಾಟ ಮಾಡಲು ಸಭೆಯಲ್ಲಿ ನಿರ್ಧರಿಸಬಾರದಿತ್ತು ರೈತರಿಗೆ ಬೆಲೆಯೇ ಇಲ್ಲದಂತೆ ಕಾಣುತ್ತಿದೆ. ಅಂಗಡಿಕಾರರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಬಿಟ್ಟರೆ ರೈತರಿಗೆ ಯಾವ ಅನುಕೂಲವು ಆಗಿಲ್ಲ ಕೃಷಿ ಅಧಿಕಾರಿಗೆ ಹಾಗೂ ಖಾಸಗಿ ಅಂಗಡಿಕಾರರದೆ ತಾಲೂಕಿನಲ್ಲಿ ದರ್ಬಾರ ಆಗಿದೆ ಅವರ ಅನುಕೂಲದಂತೆ ಆದೇಶ ಮಾಡಲಾಗುತ್ತಿದೆ. ಎಂದು ಗ್ರಾಮೀಣ ಭಾಗದ ರೈತರು ತಮ್ಮ ಅಳಲನ್ನು ತೊಡಿಕೊಂಡರು.
ವಾಕರಸಾ ಸಂಸ್ಥೆ ಅಧ್ಯಕ್ಷ ವಿ.ಎಸ್.ಪಾಟೀಲ, ಕೃಷಿ ಸಹಾಯಕ ನಿರ್ದೇಶಕ ಎಂ.ಎಸ್.ಕುಲಕರ್ಣಿ, ರಾಜ್ಯ ರೈತಸಂಘ ಮತ್ತು ಹಸಿರು ಸೇನೆಯ ತಾಲೂಕು ಅಧ್ಯಕ್ಷ ಪೀರಜ್ಜ ಸಾಗರ, ಮುಖಂಡರಾದ ನಿಂಗಪ್ಪ ಕುರಬರ, ಗುರು ರಾಯ್ಕರ, ಮಂಜುನಥ ಶೇಟ್, ರೂಪೇಶ ಚವ್ಹಾಣ ಸೇರಿದಂತೆ ಇನ್ನಿತರ ರೈತರು ಇದ್ದರು.