ಶಿರಸಿ: ತಾಲೂಕಿನ ಎ.ಪಿ.ಎಮ್.ಸಿ ಯ ನೂತನ ಅಧ್ಯಕ್ಷರಾಗಿ ಬನವಾಸಿಯ ಭಾರತೀಯ ಜನತಾ ಪಕ್ಷದ ದಕ್ಷ ಮುಖಂಡ ಶಿವಕುಮಾರ ಗೌಡ ಆಯ್ಕೆಯಾಗಿದ್ದು, ಕಾರ್ಮಿಕ ಖಾತೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಶುಭಹಾರೈಸಿದ್ದಾರೆ.
ತಮ್ಮ ನೇತೃತ್ವದಲ್ಲಿ ಆಡಳಿತ ಮಂಡಳಿಯ ನಿರ್ದೇಶಕರೆಲ್ಲರ ಸಹಕಾರದಿಂದ, ತಾಲೂಕಿನ ಕೃಷಿಕರ ಬೆನ್ನೆಲುಬಾಗಿ ನಿಲ್ಲುವುದರ ಜೊತೆಯಲ್ಲಿ, ನಿಮ್ಮ ಮಾರ್ಗದರ್ಶನದಲ್ಲಿ ತಾಲೂಕಿನ ಎ.ಪಿ.ಎಮ್.ಸಿ ಯು ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದು ಆಶಿಸಿ ಶುಭಕೋರಿದರು.