• Slide
    Slide
    Slide
    previous arrow
    next arrow
  • ಹುಲೇಕಲ್’ನಲ್ಲಿ ಮನುವಿಕಾಸ ಮಹಿಳಾ ಸ್ವ ಸಹಾಯ ಸಂಘ ಒಕ್ಕೂಟ ಸಭೆ ಯಶಸ್ವಿ

    300x250 AD

    ಶಿರಸಿ: ಮನುವಿಕಾಸ ಸ್ವಯಂ ಸೇವಾ ಸಂಸ್ಥೆಯ ವತಿಯಿಂದ ಈಡಲ್ ಗೀವ್ ಫೌಂಡೇಶನ್ ಹಾಗೂ ದಲ್ಯಾನ್ ಫೌಂಡೇಶನ್ ಗಳ ಸಹಯೋಗದಲ್ಲಿ ಹುಲೇಕಲ್ ಭಾಗದ ಮನುವಿಕಾಸ ಸಂಸ್ಥೆಯ ಮಹಿಳಾ ಸ್ವ ಸಹಾಯ ಸಂಘಗಳ ಒಕ್ಕೂಟ ಸಭೆಯನ್ನು ಹುಲೇಕಲ್ ಗ್ರಾಮ ಪಂಚಾಯತ ಸಭಾಭವನದಲ್ಲಿ ಏರ್ಪಡಿಸಲಾಗಿತ್ತು.

    ಕಾರ್ಯಕ್ರಮದಲ್ಲಿ ಮನುವಿಕಾಸ ಸಂಸ್ಥೆಯ ತಾಲೂಕಾ ಸಂಯೋಜಕ ಅಶ್ವಥ್ ನಾಯಕ್ ಮಾತನಾಡಿ ಹೊಸ ಸಂಘದ ಸದಸ್ಯರಿಗೆ ಮನುವಿಕಾಸ ಸಂಸ್ಥೆಯ ಹಿನ್ನೆಲೆ ಹಾಗೂ ಪರಿಚಯ ಮಾಡಿಕೊಟ್ಟರು. ಸಂಸ್ಥೆಯ ಕಾರ್ಯಚಟುವಟಿಕೆ ಹಾಗೂ ತರಬೇತಿ ಮತ್ತು ಸೌಲಭ್ಯಗಳ ಕುರಿತು ಒಕ್ಕೂಟ ಸಭೆಯಲ್ಲಿ ವಿವರಿಸಿದರು. ಇದರ ಜೊತೆಗೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಅಧಿನಿಯಮದ (MGNREGA) ಮಾಹಿತಿಯನ್ನು ಸಂಘದ ಸದಸ್ಯರಿಗೆ ನೀಡಲಾಯಿತು.

    300x250 AD


    ಈ ಸಂದರ್ಭದಲ್ಲಿ ಹುಲೇಕಲ್ ಭಾಗದ ಮಹಿಳಾ ಸ್ವ ಸಹಾಯ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮನುವಿಕಾಸ ಸಂಸ್ಥೆಯ ಸಿಬ್ಬಂದಿ ಮಣಿಕಂಠ ಚಲವಾದಿ ಕಾರ್ಯಕ್ರಮ ಸ್ವಾಗತಿಸಿದರು. ಶ್ರೀಕಾಂತ ಹೆಗಡೆ ವಂದಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top