ಕುಮಟಾ: ಗಾಣಿಗ ಯುವ ಬಳಗ (ರಿ) ಕುಮಟಾ ಇವರ ವತಿಯಿಂದ ಸಮಾಜದ ಪುಟ್ಟ ಮಕ್ಕಳ ಪ್ರತಿಭೆಯನ್ನು ಗುರುತಿಸುವ ನಿಟ್ಟಿನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಪ್ರಪ್ರಥಮ ಬಾರಿಗೆ ಮುದ್ದು ಕೃಷ್ಣ ಸ್ಪರ್ಧೆ-2021 ಆಯೋಜಿಸಲಾಗಿದ್ದು, ಪುಟಾಣಿಗಳ ಹೆಸರನ್ನು ನೊಂದಾಯಿಸಿ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಆಯೋಜಕರು ತಿಳಿಸಿದ್ದಾರೆ.
ಮುದ್ದು ಕೃಷ್ಣ ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಿಗಳು ಮುದ್ದು ಕೃಷ್ಣ ಫೆÇೀಟೊ ಜೊತೆ ಜನನ ಪ್ರಮಾಣಪತ್ರ ಅಥವಾ ಆಧಾರ ಕಾರ್ಡ್‍ನ್ನು ಯುವಬಳಗದ ವಾಟ್ಸಾಪ್ ಸಂಖ್ಯೆ 9742252260 ಗೆ ಕಳುಹಿಸಬೇಕು. ಯಾವುದೇ ತಿದ್ದುಪಡಿ ಮಾಡಿದ ಫೆÇೀಟೊಗಳಿಗೆ ಅವಕಾಶವಿಲ್ಲ. ಸ್ಪರ್ಧೆಯ ಪ್ರವೇಶ ಶುಲ್ಕವನ್ನು ಆನ್‍ಲೈನ್ ಪಾವತಿ ಮೂಲಕ 8660250760 ನಂ.ಗೆ ಕಳುಹಿಸುವುದು ಹಾಗೂ ಇದರ ಆನ್‍ಲೈನ್ ರಸೀದಿಯನ್ನು ಯುವ ಬಳಗದ ವಾಟ್ಸಾಪ್ ನಂಬರ್, 9742252260 ಗೆ ಕಳುಹಿಸಬೇಕು.
ಫೆÇೀಟೋ ಕಳುಹಿಸಲು ಆ. 24 ಕೊನೆಯ ದಿನವಾಗಿರುತ್ತದೆ. ಸ್ಪರ್ಧಾ ವಿಜೇತರನ್ನು ಶೇ.50 ಪೇಸ್ಬುಕ್ ಲೈಕ್ ಹಾಗೂ ಶೇ.50 ನಿರ್ಣಾಯಕರು ನೀಡುವ ಅಂಕಗಳ ಆಧಾರಾದ ಮೇಲೆ ಆಯ್ಕೆ ಮಾಡಲಾಗುತ್ತದೆ. ಪ್ರಥಮ 7777 ರೂ., ದ್ವಿತೀಯ 5555, ತೃತೀಯ 3333 ರೂ. ಬಹುಮಾನ ನೀಡಲಾಗುತ್ತದೆ. ಸ್ಪರ್ಧಾವಿಜೇತರ ಫಲಿತಾಂಶವನ್ನು ದಿನಾಂಕ ಆ.29 ರಂದು ಸಂಜೆ 5 ಗಂಟೆಗೆ www.globalganiga.com ಹಾಗೂ ಗಾಣಿಗ ಯುವ ಬಳಗದ ಫೇಸ್ಬುಕ್ ಪೇಜ್ ganigayuvabalaga ನಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ