ಶಿರಸಿ: ತೆಂಗಿನಕಾಯಿಗೆ ಸೂಕ್ತ ಮಾರುಕಟ್ಟೆ ಒದಗಿಸುವ ಹಿನ್ನೆಲೆಯಲ್ಲಿ ಟಿ.ಎಸ್.ಎಸ್. ನಲ್ಲಿ ತೆಂಗಿನಕಾಯಿಗಳನ್ನು ಟೆಂಡರ್ ಮೂಲಕ ಖರೀದಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು.
ಬುಧವಾರ ಟಿ.ಎಸ್.ಎಸ್. ಆವಾರದಲ್ಲಿ ಟಿಎಸ್ಎಸ್ ಕಾರ್ಯಾಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ ಅವರಿಂದ ಟೆಂಡರ್ ಡಿಕ್ಲರೇಷನ್ ಮಾಡುವ ಮೂಲಕ ಖರೀದಿ ಪ್ರಕ್ರಿಯೆಯನ್ನು ಉದ್ಘಾಟನೆ ಮಾಡಲಾಯಿತು.
ಟಿ.ಎಸ್.ಎಸ್.ವತಿಯಿಂದ ಅಡಿಕೆ, ಕಾಳುಮೆಣಸು, ಏಲಕ್ಕಿ, ಶುಂಠಿ, ಬಾಳೆಕಾಯಿ, ಹಸಿಅಡಿಕೆ, ಗೇರುಬೀಜ, ಅರಿಶಿನ ಇವುಗಳಿಗೆ ಈಗಾಲೇ ಸೂಕ್ತ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು ಈ ಯಾದಿಗೆ ತೆಂಗಿನಕಾಯಿ ಟೆಂಡರ್ ಹೊಸ ಸೇರ್ಪಡೆಯಾಗಿದೆ.
ಬುಧವಾರ ನಡೆದ ತೆಂಗಿನಕಾಯಿ ಟೆಂಡರ್ ನಲ್ಲಿ ನೀರು ಕಾಯಿಗೆ ಪ್ರತಿ ಕ್ವಿಂಟಾಲ್ ಗೆ ಕನಿಷ್ಟ 3,250 ರಿಂದ ಗರಿಷ್ಟ 3,451 ರೂ. ಹಾಗೂ ಬರಡು ಕಾಯಿ ಪ್ರತಿ ಕ್ವಿಂಟಾಲ್ ಗೆ 3,199 ರೂ. ದರದಲ್ಲಿ ಖರಿದಿಸಲಾಗಿದೆ. ಇನ್ನು ಮುಂದೆ ಸಂಘದ ಆವಾರದಲ್ಲಿ ಪ್ರತಿ ಬುಧವಾರ ಹಾಗೂ ಶನಿವಾರ ತೆಂಗಿನಕಾಯಿ ಟೆಂಡರ್ ನಡೆಸಲಾಗುತ್ತದೆ.
ಉದ್ಘಾಟನಾ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರು, ಪ್ರಧಾನ ವ್ಯವಸ್ಥಾಪಕರು, ನಿರ್ದೇಶಕರು ಹಾಗೂ ರೈತರು, ಖರೀದಿದಾರರು ಹಾಗು ಸುಮಾರು 15 ಕ್ಕೂ ಅಧಿಕ ಖರೀದಿದಾರರು ಈ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು