ಶಿರಸಿ: ಇಲ್ಲಿನ ಉಪವಿಭಾಗ ವ್ಯಾಪ್ತಿಯ 110/11 ಕೆ.ವಿ ಉಪಕೇಂದ್ರದಲ್ಲಿ 11 ಕೆ.ವಿ ಸ್ವಿಚ್‌ಗೇರ್‌ಗಳ ನಿರ್ವಹಣೆ ಹಾಗೂ ಶಿರಸಿ ಪಟ್ಟಣ ಶಾಖೆಯಲ್ಲಿ ಶಿಥಿಲಗೊಂಡಿರುವ ವಿದ್ಯುತ್ ತಂತಿ ಬದಲಾವಣೆ ಕಾಮಗಾರಿ ಹಾಗೂ 11 ಕೆ.ವಿ ಜಿ.ಓ.ಎಸ್ ಅಳವಡಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಆ.12, 13, 14 ರಂದು ಶಿರಸಿಯಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ತಿಳಿಸಿದ್ದಾರೆ.
ಆ.12 ಗುರುವಾರ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ಪಟ್ಟಣ ಶಾಖೆಯ ನಿಲೇಕಣಿ 11 ಕೆ.ವಿ ಮಾರ್ಗದ ಕುಮಟಾ ರಸ್ತೆ, ಗಾಂಧಿನಗರ, ವಿಜಯನಗರ, ಭೀಮನಗುಡ್ಡ ಪ್ರದೇಶಗಳಲ್ಲಿ. ಆ.13 ಶುಕ್ರವಾರ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ಬನವಾಸಿ ಶಾಖೆಯ ಅಂಡಗಿ ಮತ್ತು ಭಾಷಿ 11 ಕೆ.ವಿ ಮಾರ್ಗದಲ್ಲಿ ಹಾಗೂ ಆ.14 ಶನಿವಾರ ಬೆಳಿಗ್ಗೆ 10ರಿಂದ ಸಂಜೆ 6 ಗಂಟೆವರೆಗೆ ಶಿರಸಿ 110 ಕೆ.ವಿ. ಉಪಕೇಂದ್ರದಿಂದ ಹೊರಡುವ ಪಟ್ಟಣ ಮಾರ್ಗಗಳಾದ ಶಿರಸಿ-1, ಶಿರಸಿ-2, ಕಸ್ತೂರಬಾ ನಗರ, ನಿಲೇಕಣಿ ಹಾಗೂ ಮಾರಿಕಾಂಬಾ ನಗರ ಮತ್ತು ಗ್ರಾಮೀಣ ಬನವಾಸಿ, ಸುಗಾವಿ, ಸಂಪಖಂಡ, ದೇವನಳ್ಳಿ, ಕೇಂಗ್ರೆ, ಮಾರಿಗದ್ದೆ, ಹುಲೇಕಲ್, ಸಾಲ್ಕಣಿ, ವಾನಳ್ಳಿ ಮತ್ತು ತಾರಗೋಡ 11 ಕೆ.ವಿ ಮಾರ್ಗದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಕಾರಣ ಗ್ರಾಹಕರು ಸಹಕರಿಸಬೇಕಾಗಿ ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರು ಕಾರ್ಯ ಮತ್ತು ಪಾಲನಾ ಉಪ ವಿಭಾಗ, ಹೆಸ್ಕಾಂ ಶಿರಸಿ ರವರು ತಿಳಿಸಿದ್ದಾರೆ.