ಶಿರಸಿ: ಸಿದ್ದಾಪುರ ತಾಲೂಕಿನ ಗೊಂಟನಾಳದ ಮಂಜುನಾಥ ಮಡಿವಾಳ ಇತ್ತೀಚೆಗೆ ಸಂಭವಿಸಿದ ನೆರೆ ಅನಾಹುತದಿಂದ ಸಂತ್ರಸ್ಥರಾಗಿದ್ದು ಜೀವ ಜಲಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ ನೇತೃತ್ವದಲ್ಲಿ ನೆರವು ನೀಡಲಾಯಿತು.
ಮಂಜುನಾಥ ವಾಸಿಸುತ್ತಿರುವ ಮನೆಯು ಸಂಪೂರ್ಣವಾಗಿ ನಾಶವಾಗಿತ್ತು. ಅಕ್ಷರಶಃ ಅನಾಥರಾದ ಮಡಿವಾಳ ಕುಟುಂಬದ ಮನೆ ನಿರ್ಮಾಣ ಅನಿವಾರ್ಯ ಆಗಿತ್ತು. ಮನೆಯನ್ನು ಸಂಪೂರ್ಣವಾಗಿ ಕಳೆದು ಈತನಿಗೆ ನೆರವು ಅಗತ್ಯವಾಗಿತ್ತು. ಈ ಸಂದರ್ಭದಲ್ಲಿ ಊರುಗೋಲಾಗಿ ಕೆರೆ ಹೆಬ್ಬಾರರೆಂದೇ ಮನೆ ಮಾತಾಗಿರುವ ಶ್ರೀನಿವಾಸ ಹೆಬ್ಬಾರ ಮುಂದಾಳತ್ವದ ಶಿರಸಿಯ ಜೀವ ಜಲ ಕಾರ್ಯಪಡೆಯ ಸದಸ್ಯರು ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಆದ ಅನಾಹುತವನ್ನು ವೀಕ್ಷಿಸಿ, ಮುಂಜುನಾಥ ಕುಟುಂಬದವರಿಗೆ ಹಾಲಿ ಅತ್ಯಂತ ಅಗತ್ಯವಿರುವ ಮನೆ ಕಟ್ಟಲು ಸಾಮಗ್ರಿಗಳನ್ನು ಕೊಳ್ಳಲು 25 ಸಾವಿರ ನೀಡಿದರು. ಅವರ ಮಗನ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲೂ ಹಣ ನೀಡಿದರು.
ಇಂತಹ ಕಷ್ಟದ ಸುಸಮಯದಲ್ಲಿ ನಿರ್ಗತಿಕರಾದ ನಮ್ಮನ್ನು ಏನೂ ಸಂಬಂಧ ಇಲ್ಲದ, ನಿಸ್ವಾರ್ಥ ಜೀವ-ಜಲ ಕಾರ್ಯಪಡೆ ಕಾರ್ಯಕ್ಕೆ ಕೃತಜ್ಞತೆ ಸಲ್ಲಿಸಿದರು. ವೈಶಾಲಿ ವಿ.ಪಿ.ಹೆಗಡೆ, ಎಂ.ಎಂ.ಭಟ್ಟ ಕಾರೆಕೊಪ್ಪ ಅಶೋಕ ಹೆಗಡೆ, ಶ್ರೀಕಾಂತ ಹೆಗಡೆ ಇದ್ದರು