• Slide
  Slide
  Slide
  previous arrow
  next arrow
 • ಪ.ಪಂಗಡದ ಜನಾಂಗಕ್ಕೆ ಸರ್ಕಾರದ ವಿವಿಧ ಸೌಲಭ್ಯಕ್ಕೆ ಆಗ್ರಹ; ಸಿಎಂಗೆ ಮನವಿ

  300x250 AD


  ಯಲ್ಲಾಪುರ: ಪರಿಶಿಷ್ಟ ಪಂಗಡಕ್ಕೆ ಸೇರಿದ ಎಲ್ಲಾ ಧರ್ಮ ಜಾತಿಯ ಪಂಗಡದ ಜನಾಂಗಕ್ಕೂ ಸರಕಾರದ ವಿವಿಧ ಸೌಲಭ್ಯ ಸಿಗಬೇಕೆಂದು ಮುಖ್ಯಮಂತ್ರಿಗಳನ್ನು ಆಗ್ರಹಿಸಿ ಬುಧವಾರ ಕರ್ನಾಟಕ ರಾಜ್ಯ ಸಿದ್ದಿ ಬುಡಕಟ್ಟು ಜನಪರ ಸಂಘ ಕುಚಗಾಂವ್ ಸಹಸ್ರಳ್ಳಿ ಯಲ್ಲಾಪುರ ಇವರು ಅಧ್ಯಕ್ಷರಾದ ಬೇನಿತ್ ಅಂತೋನಿ ಸಿದ್ದಿ ನೇತೃತ್ವದಲ್ಲಿ ತಹಶೀಲ್ದಾರ ಕೃಷ್ಣಕಾಮಕರ ಅವರಿಗೆ ಮನವಿ ನೀಡಿದರು.


  ನೂರಾರು ವರ್ಷಗಳಿಂದ ಅರಣ್ಯ ದಲ್ಲಿ ಅತಿಕ್ರಮಣ ಮಾಡಿಕೊಂಡು ಜೀವಿಸುತ್ತಿದ್ದರೂ ಅವರಿಗೆ ಜೀವನ ಭದ್ರತೆಯಿಲ್ಲ ಯಾಕೆಂದರೆ ಕೆಲವರಿಗೆ ಪಟ್ಟಾ ಇನ್ನು ಕೆಲವರಿಗೆ ಕೇವಲ ಜಿಪಿಎಸ್ ಮಾಡಿದ್ದಾರೆ ಅದರಲ್ಲೂ ವ್ಯತ್ಯಾಸ ಕಂಡು ಬರುತ್ತದೆ. ಅದು ಸಮರ್ಪಕವಾಗಿಲ್ಲ ಪಟ್ಟ ನೀಡಿದರೂ ಸರಕಾರದ ಯಾವುದೇ ಸೌಲಭ್ಯ ಸಿಗುತ್ತಿಲ್ಲ. ಬಡವರು ಮಾಡಿಕೊಂಡ ಪೂರ್ತಿ ಅತಿಕ್ರಮಣವನ್ನು ಆದಷ್ಟು ಬೇಗ ಮಂಜೂರಿ ಮಾಡಿಸಿ ಕೊಡುವಂತೆಯೂ ಕೇಳಿದ ಇವರು ಮಂಜೂರಿಯಾಗಿ ಬಂದರೂ ಫಲಾನುಭವಿಗಳಿಗೆ ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದ ಸಂಬಂಧಪಟ್ಟ ಅಧಿಕಾರಿಗಳು ಹೆಚ್ಚಿನ ಆಸಕ್ತಿವಹಿಸಿ ಕೆಲಸ ಮಾಡಿಕೊಡಬೇಕು ಉದ್ಯೋಗ ಖಾತ್ರಿ ಯೊಜನೆ ಅಥವಾ ಗಂಗಾಕಲ್ಯಾಣದಂತಹ ಯೋಜನೆ ಬಳಸಿಕೊಳ್ಳಲು ಪಹಣಿ ಪತ್ರ ಕೇಳುತ್ತಾರೆ. ಆದರೆ ಕಾಲಂ ನಂಬರ.9 ರಲ್ಲಿ ಕ್ಷೇತ್ರ ದಾಖಲಿರುವುದಿಲ್ಲ. ಇದರಿಂದ ಬಹಳ ಕಷ್ಟವಾಗಿದೆ. ಪರಿಶಿಷ್ಟ ಜಾತಿ, ಪಂಗಡದ ಎಲ್ಲಾ ಯೋಜನೆಯ ಸೌಲಭ್ಯ ಬಳಸಿಕೊಳ್ಳುವುದಕ್ಕೆ ಅವಕಾಶ ಕಲ್ಪಿಸಿ ಕೊಡುವಂತೆ ಮನವಿಯಲ್ಲಿ ವಿನಂತಿಸಲಾಗಿದೆ. ಅಷ್ಟಲ್ಲದೇ ನಮ್ಮ ಸಮುದಾಯದ ಜನರು ದೌರ್ಜನ್ಯಕ್ಕೆ ಒಳಗಾದಾಗ ವಿಳಂಬ ಮಾಡದೇ ಪ್ರಕರಣವನ್ನು ಇತ್ಯರ್ಥ ಮಾಡಿ ನ್ಯಾಯ ಒದಗಿಸಿ ಕೊಡುವಂತೆ ಮನವಿ ಮಾಡಿದ್ದಾರೆ.

  300x250 AD


  ಮನವಿ ನೀಡಲು ಸಂಘದ ಪ್ರಮುಖರಾದ ಜೋನ್ ಕೋಸ್ತಾ ಸಿದ್ದಿ, ಅಲ್ಲಾಭಕ್ಷ ಅಲ್ಲಿ ಸಾಬ್ ಪಾಟೀಲ್, ಲಾರೆನ್ಸ್ ಕೈತಾನ ಸಿದ್ದಿ, ಸಂತೋಷ ಜೆ, ಮೌಲಾಲಿ ಅಜಗಾಂವಕರ, ವಿಲ್ಸನ್ ಬಸ್ತಾಂವ ಡಿಸೋಜಾ ಸಿದ್ದಿ, ತೆರೇಜಾ ಸಿದ್ದಿ ಜುಲಿಯಾ ರುಜಿಯಾ ಸಿದ್ದಿ, ಶಂಕರ ನಾರಾಯಣ ಸಿದ್ದಿ, ಮನವೇಲ್ ಮಾತೇಸ್ ಸಿದ್ದಿ ಸೇರಿದಂತೆ 20ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.

  Share This
  300x250 AD
  300x250 AD
  300x250 AD
  Leaderboard Ad
  Back to top