ಯಲ್ಲಾಪುರ: ಮಳೆಯಿಂದ ಭೂಕುಸಿತ ಪ್ರದೇಶವಾದ ಕಳಚೆ ತಳಕೆಬೈಲ್ ಗಳಿಗೆ ಉಮ್ಮಚಗಿಯ ಶ್ರೀಮಾತಾ ವಿವಿಧೋದ್ದೇಶ ಸಹಕಾರಿ ಅಧ್ಯಕ್ಷರು ಹಾಗೂ ಸರ್ವಜ್ಞೇಂದ್ರ ಸರಸ್ವತಿ ಪ್ರತಿಷ್ಠಾನ ಸ್ವರ್ಣವಲ್ಲೀ ಇದರ ಕಾರ್ಯಾಧ್ಯಕ್ಷರು ಆದ ಜಿ ಎನ್ ಹೆಗಡೆ ಹಿರೇಸರ ಭೇಟಿ ನೀಡಿ ಪರಿಶೀಲಿಸಿದರು.
ಕಳಚೆ, ಹೆಬ್ಬಾರ ಕುಂಬ್ರಿ ಪಿ ಜಿ ಹೆಗಡೆ ಮನೆಯ ಬಳಿ ಕುಸಿತವಾಗಿರುವದನ್ನು ತಳಕೆ ಬೈಲ್ ಬಳಿ ಕುಸಿತವಾಗಿರುವದನ್ನು ನೋಡಿದರೆ ಇದು ಮುಂದೆ ತುಂಬಾ ಅಪಾಯಕಾರಿ. ಇಲ್ಲಿ ವಾಸಕ್ಕೆ ಯೋಗ್ಯವಾಗಿಲ್ಲ. ಇಲ್ಲಿಯ ಜನರಿಗೆ ಪರ್ಯಾಯ ವ್ಯವಸ್ಥೆಯ ಅಗತ್ಯತೆ ಇದೆ. ಸರಕಾರ ಈ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕಿದೆ. ಸ್ವರ್ಣವಲ್ಲಿ ಶ್ರೀಗಳಿಗೆ ಇಲ್ಲಿಯ ಬಗ್ಗೆ ವರದಿ ನೀಡುತ್ತೇನೆ ಎಂದರು.
ಇಲ್ಲಿ ಬಹುತೇಕ ಮಂದಿ ಬಹಳ ಕಷ್ಟದಲ್ಲಿದ್ದಾರೆ. ಈ ಭಾಗದಲ್ಲಿ ನಮ್ಮ ಸಹಕಾರಿಯ ಪಲಾನುಭವಿಗಳಿದ್ದು, ಇವರ ಬಗೆಗೂ ಕಮೀಟಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳುವದಾಗಿ ಮಾದ್ಯಮಕ್ಕೆ ತಿಳಿಸಿದರು.
ಈ ವೇಳೆ ಸಹಕಾರಿ ಉಪಾಧ್ಯಕ್ಷ ಸೂರ್ಯನಾರಾಯಣ ಭಟ್ಟ , ನಿರ್ದೇಶಕರಾದ ಆರ್ ಎಲ್ ಭಟ್ಟ, ವನರಾಗ ಶರ್ಮಾ, ಕೆ ಎಸ್ ಭಟ್ಟ ಆನಗೋಡ ಮುಂತಾದವರಿದ್ದರು.