ಯಲ್ಲಾಪುರ: ತಾಲೂಕಿನ ಮಾವಳ್ಳಿ ಕ್ರಾಸ್ ಬಳಿಯಲ್ಲಿ ರಾಷ್ಟ್ರೀಯ ಹೆದ್ದಾರಿ 63 ಪಕ್ಕ ನಾಮಫಲಕವೊಂದು ಮುರಿದು ಬಿದ್ದ ಸ್ಥಿತಿಯಲ್ಲಿದೆ. ಹೆದ್ದಾರಿಯ ಪಕ್ಕ ಎಷ್ಟೆಲ್ಲಾ ನಾಮಫಲಕ ಇರುತ್ತದೆ ಇದೇನು ವಿಶೇಷ ಎಂದು ಮೂಗು ಮುರಿಯಬೇಡಿ.
ಹೆದ್ದಾರಿಯ ಮೇಲೆ ನಿಧಾನವಾಗಿ ಸಾಗಿ ಅಪಘಾತ ವಲಯ ಎಂದು ಸಾರುವ ಹೆದ್ದಾರಿ ಪಕ್ಕದಲ್ಲಿರುವ ಫಲಕಕ್ಕೆ ಯಾವುದೋ ವಾಹನವೊಂದು ಗುದ್ದಿದೆ. ಇದರಿಂದಾಗಿ ನಿಧಾನವಾಗಿ ಸಾಗಿ ಎಂದು ಹೇಳಿರುವುದು ಸಹ ಯಾವುದೋ ವಾಹನ ಚಾಲಕರಿಗೆ ಅಸಹನೀಯವಾಗಿ ಗೋಚರಿಸಿತೋ ಎನೋ. ಈಗ ಫಲಕ ಕಾಲುಮುರಿದ ಸ್ಥಿತಿಯಲ್ಲಿ ತನ್ನ ಕರ್ತವ್ಯ ನಿರ್ವಹಿಸುತ್ತಿದೆ. ಇದು ವಾಹನ ಸವಾರರಿಗೆ ಪಾಠವಾಗಲೆಂಬುದು ಫಲಕದ ಆಶಯವಷ್ಟೆ!