Slide
Slide
Slide
previous arrow
next arrow

ನಾಗರ ಪಂಚಮಿ ಹಬ್ಬಕ್ಕೆ ಅರಿಶಿನ ಎಲೆ ಕಡುಬು ಮಾಡಿ ಸವಿಯಿರಿ

300x250 AD

ಅಡುಗೆ ಮನೆ: ಬೇಕಾಗುವ ಸಾಮಗ್ರಿ: ದೋಸೆ ಅಕ್ಕಿ/ಕುಚ್ಚಲಕ್ಕಿ 2 ಕಪ್, ಬೆಲ್ಲ – 1 ಕಪ್, ತೆಂಗಿನತುರಿ – 1 ಕಪ್, ಅರಸಿನ ಎಲೆ, ರುಚಿಗೆ ತಕ್ಕಷ್ಟು ಉಪ್ಪು ಎಳ್ಳು – ಸ್ವಲ್ಪ

ಮಾಡುವ ವಿಧಾನ: 2 ಗಂಟೆ ಕಾಲ ನೆನೆಸಿದ ದೋಸೆ ಅಕ್ಕಿಗೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ (ಕುಚ್ಚಲಕ್ಕಿಯಾದರೆ 6 ಗಂಟೆ ಕಾಲ ನೆನೆಸಿಡಬೇಕು). ನೀರು ಜಾಸ್ತಿ ಸೇರಿಸದೆ ಗಟ್ಟಿಯಾಗಿ ರುಬ್ಬಿಕೊಳ್ಳಬೇಕು. ಬಳಿಕ ಇನ್ನೊಂದು ಪಾತ್ರೆಯಲ್ಲಿ 1 ಕಪ್ ಬೆಲ್ಲವನ್ನು ತುರಿದು ಅದಕ್ಕೆ 1 ಕಪ್ ಕಾಯಿತುರಿ ಸೇರಿಸಿ ಮಿಕ್ಸ್ ಮಾಡಿ.

300x250 AD


ಈ ಮಿಶ್ರಣಕ್ಕೆ ಹುರಿದ ಕಪ್ಪು ಎಳ್ಳು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ, ನಂತರ ಅರಶಿನ ಎಲೆ ತೆಗೆದುಕೊಂಡು ಅದಕ್ಕೆ ಅಕ್ಕಿ ಹಿಟ್ಟನ್ನು ಸವರಿ, ತೆಳ್ಳಗೆ ಹಾಕಬೇಕು. ಇದರ ಮೇಲೆ ಬೆಲ್ಲ, ಕಾಯಿತುರಿಯ ಮಿಶ್ರಣವನ್ನು ಹಾಕಿ ಎಲೆಯನ್ನು ಮಡಚಿ. ನಂತರ ಇದನ್ನು ಇಡ್ಲಿ ಪಾತ್ರೆಯಲ್ಲಿಟ್ಟು, 10-15 ನಿಮಿಷ ಕಾಲ ಹಬೆಯಲ್ಲಿ ಬೇಯಿಸಿದರೆ ಬಾಯಲ್ಲಿ ನೀರೂರುವ ರುಚಿಯಾದ ಅರಶಿನ ಎಲೆ ಕಡುಬು ರೆಡಿ.

Share This
300x250 AD
300x250 AD
300x250 AD
Back to top