ಮೃತ್ಯೋರ್ಬಿಭೇಷಿ ಕಿಂ ಮೂಢ ಭೀತಂ ಮುಂಚತಿ ಕಿಂ ಯಮಃ
ಅಜಾತಂ ನೈವ ಗೃಹ್ಣಾತಿ ಕುರು ಯತ್ನಮಜನ್ಮನಿ ||
’ಮೂಢನೇ, (ಮೋಹಗೊಂಡವನೇ), ನೀನು ಸಾವಿಗೆ ಹೆದರುವಿಯಲ್ಲವೇ? ಇವಾಗೇನು, ನೀನು ಭಯಗೊಂಡ ಮಾತ್ರಕ್ಕೆಯಮಧರ್ಮನು ನಿನ್ನನ್ನು ಬಿಟ್ಟುಬಿಡುವನೇನು? ಇಲ್ಲವಷ್ಟೇ! ಸಾವಿನ ಭಯ ಶುರುವಾದ್ದೇ ನೀನು ಹುಟ್ಟಿದ್ದರಿಂದಾಗಿ. ಹುಟ್ಟೇಇಲ್ಲದಿದ್ದರೆ ಸಾವಿನ ಭಯ ಇರುತ್ತಿರಲಿಲ್ಲ. ಹುಟ್ಟದಿರುವವನನ್ನು ಯಮನು ಹಿಡಿದುಕೊಳ್ಳಲಾರ. ಹಾಗಾಗಿ ಹುಟ್ಟೇ ಇಲ್ಲದಸ್ಥಿತಿಯನ್ನು ಸೇರು. ಮೋಕ್ಷವನ್ನು ಹೊಂದುವ ಕುರಿತು ಚಿಂತಿಸು. ಆಗ ಭಯವಿಲ್ಲದಾಗಿ ಅಕುತೋಭಯನಾಗುವೆ’ ಎಂಬುದಾಗಿಸುಭಾಷಿತಕಾರನು ಸಾಮಾನ್ಯನನ್ನು ಎಚ್ಚರಿಸುತ್ತಿದ್ದಾನೆ.
– ಶ್ರೀ ನವೀನ ಗಂಗೋತ್ರಿ