ಸಿದ್ದಾಪುರ: ಸೋಮವಾರ ಪ್ರಕಟವಾದ 2020-21ನೇ ಸಾಲಿನ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟವಾಗಿದ್ದು ತಾಲೂಕಿನ ನಾಣಿಕಟ್ಟಾ (ತ್ಯಾಗಲಿ) ಪ್ರೌಢಶಾಲೆಯ ತೇಜಸ್ವಿ ಹೆಗಡೆ 623 (99.68%)ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಹಾಗೂ ರಾಜ್ಯಕ್ಕೆ ದ್ವಿತೀಯ ಸ್ಥಾನವನ್ನು ತನ್ನದಾಗಿಸಿಕೊಂಡಿದ್ದಾನೆ.
ಕನ್ನಡ-123,ಇಂಗ್ಲಿಷ್,ಹಿಂದಿ, ಗಣಿತ,ವಿಜ್ಞಾನ, ಸಮಾಜ ವಿಜ್ಞಾನ ವಿಷಯಗಳಿಗೆ ತಲಾ 100 ಅಂಕ ಪಡೆದಿರುತ್ತಾನೆ.
ಇವನು ವಾನಳ್ಳಿ ಹೈಸ್ಕೂಲ್ ಶಿಕ್ಷಕಿ ರೇಖಾ ಹೆಗಡೆ ಮತ್ತು ವಸಂತ ಹೆಗಡೆ ಇವರ ಪುತ್ರನಾಗಿದ್ದು, ಈತನ ಸಾಧನೆಗೆ ಹೈಸ್ಕೂಲ್ ಶಿಕ್ಷಕ ವೃಂದ, ಆಡಳಿತ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.