ಶಿರಸಿ: ತಾಲೂಕಿನ ಶ್ರೀ ಸಿದ್ಧಿವಿನಾಯಕ ಪ್ರೌಢಶಾಲೆ ಗೋಳಿ ಇದರ 2021ರ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ಶೇಕಡಾ 100 ರಷ್ಟಾಗಿದ್ದು, ಪ್ರೌಢಶಾಲೆಯ 2021ರ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಕುಳಿತ 27 ವಿದ್ಯಾರ್ಥಿಗಳಲ್ಲಿ 27 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಉತ್ತೀರ್ಣತಾ ಪ್ರಮಾಣ ಶೇಕಡಾ 100 ರಷ್ಟಾಗಿದ್ದು, ಗುಣಾತ್ಮಕ ಶಿಕ್ಷಣ ಫಲಿತಾಂಶದಲ್ಲಿ 89.25% ಸಾಧನೆ ಮಾಡಿದ್ದು `ಎ’ ಶ್ರೇಣಿ ಗಳಿಸಿ ಸಾಧನೆ ಮಾಡಿದೆ. ಕಾವ್ಯಾ ಕೃಷ್ಣ ಮಡಿವಾಳ ನೆಗ್ಗು ಇವಳು ಶೇ 95.36%(596/625) ಪ್ರತಿಶತ ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ, ಅಭಿಷೇಕ ಅಶೋಕ ಶೇಟ್ ಗೋಳಿ ಶೇ 95.20%(595/625) ಪ್ರತಿಶತ ಅಂಕ ಪಡೆದು ದ್ವಿತೀಯ ಸ್ಥಾನ, ಸುಮಂತ ಮಂಜುನಾಥ ಗೌಡ ಕೊಡಗಿಬೈಲ್ ಶೇ.93.44%(584/625) ಪ್ರತಿಶತ ಅಂಕ ಪಡೆದು ಶಾಲೆಗೆ ತೃತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. 15 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, 9 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 3 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ಈ ಕುರಿತು ಆಡಳಿತ ಮಂಡಳಿಯ ಅಧ್ಯಕ್ಷ ಎಮ್.ಎಲ್ ಹೆಗಡೆ ಹಲಸಿಗೆ ಮತ್ತು ಆಡಳಿತ ಮಂಡಳಿಯ ಸದಸ್ಯರುಗಳು ಅಭಿನಂದನೆ ಸಲ್ಲಿಸಿದ್ದಾರೆ. ಪ್ರೌಢಶಾಲೆಯ ಮುಖ್ಯಾಧ್ಯಾಪಕ ಎಂ.ಜಿ.ಹೆಗಡೆ ಮತ್ತು ಶಿಕ್ಷಕ-ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.