ಶಿರಸಿ: ಜುಲೈ 2021 ರಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶಿರಸಿಯ ನರೇಬೈಲ್‌ನ ಮಿಯಾರ್ಡ್ಸ ಚಂದನ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ನೂರಕ್ಕೆ ನೂರರ ಫಲಿತಾಂಶದ ಸಾಧಿಸಿದೆ ಮತ್ತು 7 ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ಸ್ಥಾನ ಪಡೆದಿದ್ದಾರೆ.
ರಶ್ಮೀ ರಾಮದಾಸ ಪೈ 621/625(99.36%) ರಾಜ್ಯಕ್ಕೆ 3ನೇ ಸ್ಥಾನ, ಶ್ರೀಹರ್ಷ ಗಜಾನನ ಹೆಗಡೆ 620/625(99.20%) ರಾಜ್ಯಕ್ಕೆ 4ನೇ ಸ್ಥಾನ, ಸಿರಿ ನರಸಿಂಹ ಹೆಗಡೆ 617/625 (98.72%) ರಾಜ್ಯಕ್ಕೆ 7ನೇ ಸ್ಥಾನ, ಬಿ.ಜಿ ಶಮನ್ 616/625 (98.56%) ಹಾಗೂ ಪನ್ನಗ ರವೀಂದ್ರ ಹೆಗಡೆ 616/625 (98.56%)ರಾಜ್ಯಕ್ಕೆ 8ನೇ ಸ್ಥಾನ, ಶ್ರೇಯಾ ವೆಂಕಟೇಶ ಭಟ್ 615/625 (98.40%) ರಾಜ್ಯಕ್ಕೆ 9ನೇ ಸ್ಥಾನ, ಸೌಮ್ಯ ರವಿ ಹೆಗಡೆ 614/625 (98.24%) ರಾಜ್ಯಕ್ಕೆ 10 ನೇ ಸ್ಥಾನ ಪಡೆದಿದ್ದಾರೆ.
ಪರೀಕ್ಷೆಗೆ ಕುಳಿತ 64 ವಿದ್ಯಾರ್ಥಿಗಲ್ಲಿ 39 ವಿದ್ಯಾರ್ಥಿಗಳು 85% ಗಿಂತಲೂ ಅಧಿಕ ಅಂಕದಲ್ಲಿ ಮತ್ತು 25 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ದ್ವಿತೀಯ ಭಾಷೆ ಕನ್ನಡದಲ್ಲಿ 12 ವಿದ್ಯಾರ್ಥಿಗಳು, ತೃತೀಯ ಭಾಷೆ ಹಿಂದಿಯಲ್ಲಿ 20 ವಿದ್ಯಾರ್ಥಿಗಳು, ಗಣಿತ ವಿಷಯದಲ್ಲಿ 5 ವಿದ್ಯಾರ್ಥಿಗಳು, ವಿಜ್ಞಾನ ವಿಷಯದಲ್ಲಿ 4 ವಿದ್ಯಾರ್ಥಿಗಳು, ಸಮಾಜ ವಿಜ್ಞಾನ ವಿಷಯದಲ್ಲಿ 14 ವಿದ್ಯಾರ್ಥಿಗಳು 100 ಕ್ಕೆ 100 ಅಂಕಗಳನ್ನು ಪಡೆದಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಆಡಳಿತ ಮಂಡಳಿ, ಶಿಕ್ಷಕರು ಮತ್ತು ಪಾಲಕರು ಅಭಿನಂದಿಸಿದ್ದಾರೆ.