ಯಲ್ಲಾಪುರ : 2020-2021ನೇ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸ್ಥಳೀಯ ವೈ.ಟಿ.ಎಸ್.ಎಸ್ ಆಂಗ್ಲಮಾಧ್ಯಮ ಶಾಲೆಯು ಶೇ.89.88 ಫಲಿತಾಂಶ ದಾಖಲಿಸಿದೆ. ಪರೀಕ್ಷೆಗೆ ಕುಳಿತ 30 ವಿದ್ಯಾರ್ಥಿಗಳಲ್ಲಿ 30 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶಾಲೆಯು ತಾಲೂಕಿನಲ್ಲಿ ದ್ವಿತೀಯ ಸ್ಥಾನದಲ್ಲಿದೆ.
ಆದಿತ್ಯಶಂಕರ ಅರವಿಂದ ಶರ್ಮ ಹಾಗೂ ವಿವೇಕ್ ಜಿ 607(97.12%) ಅಂಕ ಗಳಿಸಿ ಶಾಲೆಗೆ ಪ್ರಥಮ, ವೈಷ್ಣವಿ ಕೃಷ್ಣಮೂರ್ತಿ ಹೆಗಡೆ 605 (96.8%) ಗಳಿಸಿ ದ್ವಿತೀಯ ಹಾಗೂ ವಿಂದ್ಯಾ ಶ್ರೀಕೃಷ್ಣ ಹೆಗಡೆ 595 (95.2%) ಗಳಿಸಿ ತೃತೀಯ ಸ್ಥಾನ ಗಳಿಸಿದ್ದಾರೆ.
ಈ ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷರಾದ ಗಜಾನನ ಬಾಬುರಾವ ಭಟ್ಟ, ಉಪಾಧ್ಯಕ್ಷ ಪ್ರಸನ್ನ ಗುಡಿಗಾರ, ಕಾರ್ಯದರ್ಶಿ ರಾಜೇಂದ್ರಪ್ರಸಾದ ಭಟ್ಟ ಹಾಗೂ ಸಂಸ್ಥೆಯ ಎಲ್ಲಾ ಸದಸ್ಯರೂ ಮುಖ್ಯಾಧ್ಯಾಪಕಿ ಶೈಲಜಾ ಮಾಪ್ಸೇಕರ್, ಪ್ರಾಂಶುಪಾಲರಾದ ವಾಣಿಶ್ರೀ ಹೆಗಡೆ ಮತ್ತು ಎಲ್ಲಾ ಉಪನ್ಯಾಸಕ, ಶಿಕ್ಷಕ, ಹಾಗೂ ಸಿಬ್ಬಂದಿ ವರ್ಗದವರೂ ಅಭಿನಂದಿಸಿದ್ದಾರೆ.