ಯಲ್ಲಾಪುರ: ಸೋಮವಾರ ಪ್ರಕಟಗೊಂಡ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ವಿಶ್ವದರ್ಶನ ಶಿಕ್ಷಣ ಸಂಸ್ಥೆ ಶೇ. 100ರ ಫಲಿತಾಂಶ ದಾಖಲಿಸಿದೆ.
ವಿಶ್ವದರ್ಶನ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ವಿವೇಕ ನಾಗೇಶ ಭಟ್ಟ ಹಾಗೂ ಸನ್ನಿಧಿ ಪಿ ಭಟ್ಟ 616 ಅಂಕ ಪಡೆಯುವ ಮೂಲಕ ಅತ್ಯುನ್ನತ ಶ್ರೇಣಿಯಲ್ಲಿ ಉತ್ತಿರ್ಣರಾಗಿದ್ದಾರೆ. ಇದರೊಂದಿಗೆ ಸಾತ್ವಿಕ್ ಹೆಗಡೆ 615, ಅಜಿತ್ ಗೋಪಾಲಕೃಷ್ಣ ಭಟ್ಟ, ದಕ್ಷ ಅಜಯ್ ನಾಯ್ಕ 614, ಹೃತಿತ್ ವಿಶಾಲ್ ಪಂಡಿತ್ 607, ಪ್ರಣವ್ ಗಾಂವ್ಕರ್ 606, ಶರತ್ ಅರವಿಂದ ಹೆಗಡೆ 606, ಯಶಸ್ವಿನಿ ಶ್ರೀಪತಿ ಭಟ್ಟ 606 ಹಾಗೂ ಸಂಪದಾ ಪಿ ಭಟ್ಟ 605 ಅಂಕಗಳನ್ನು ಪಡೆಯುವ ಮೂಲಕ ಮೊದಲ ಹತ್ತು ಸ್ಥಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ವಿಶ್ವದರ್ಶನ ಇಡಗುಂದಿ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಸಂಕೇತ ವಿನೋದ ಭಟ್ಟ 609, ಪ್ರಸಾದ ಶ್ರೀಪಾದ ಭಟ್ಟ 607, ಅನನ್ಯ ಗಣಪತಿ ಹೆಗಡೆ 602, ಚಿನ್ಮಯ ಕೃಷ್ಣ ಪಟಗಾರ 595, ಮಾನಸಾ ಕೃಷ್ಣ ಭಟ್ಟ 594, ಸಿಂಧು ಶಿವರಾಮ ಗಾಂವ್ಕರ್ 552, ವೇದಾ ಚಂದ್ರಶೇಖರ ಹೆಗಡೆ 550, ಶೃತಿ ಶ್ರೀಪತಿ ಹೆಗಡೆ 540, ಶಾಂತಿಕಾ ಗಣಪತಿ ಭಟ್ಟ 538, ರಾಜೇಶ್ ತಾರಾಕಾಂತ ಆಗೇರ್ 512 ಅಂಕ ಪಡೆದು ಸಾಧನೆ ಮಾಡಿದ್ದಾರೆ. ಸಾಧಕ ವಿದ್ಯಾರ್ಥಿಗಳಿಗೆ ಸಂಸ್ಥೆಯ ಆಡಳಿತ ಮಂಡಳಿಯು ಅಭಿನಂದಿಸಿದೆ.