• Slide
  Slide
  Slide
  previous arrow
  next arrow
 • ಸರಕುಳಿ ಪ್ರೌಢಶಾಲೆ ಶೇಕಡಾ ನೂರರಷ್ಟು ಫಲಿತಾಂಶ

  300x250 AD

  ಸಿದ್ದಾಪುರ: 2020-21 ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ತಾಲೂಕಿನ ಸರಕುಳಿ ಪ್ರೌಢಶಾಲೆಯಿಂದ ಪರೀಕ್ಷೆಗೆ ಹಾಜರಾದ 36 ವಿದ್ಯಾರ್ಥಿಗಳಲ್ಲಿ ಎಲ್ಲಾ 36 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶಾಲಾ ಫಲಿತಾಂಶ 100% ದಾಖಲಾಗಿದೆ.


  7 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ (90%ಕ್ಕಿಂತ ಅಧಿಕ), 29 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ (60%ಕ್ಕಿಂತ ಅಧಿಕ) ಉತ್ತೀರ್ಣರಾಗಿದ್ದಾರೆ. ಶ್ರವಣ ಹೆಗಡೆ 625 ಕ್ಕೆ 621 (99.36%) ಅಂಕ ಪಡೆದು, ರಾಜ್ಯಕ್ಕೆ 4ನೇ ಸ್ಥಾನ. ತಾಲೂಕಿಗೆ 3ನೇ ಸ್ಥಾನ ಹಾಗೂ ಪ್ರೌಢಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾನೆ. ಪ್ರಥಮ ಹೆಗಡೆ 625ಕ್ಕೆ 617 (98,72%) ಅಂಕ, ರೋಹಿತ್ ಗೌಡ 625ಕ್ಕೆ 598 (95.68%) ಪಡೆದು ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ.

  300x250 AD

  ಪ್ರೌಢಶಾಲೆಯ ಗುಣಾತ್ಮಕ ಫಲಿತಾಂಶ 92.02 ರಷ್ಟಾಗಿದ್ದು, ಸಾಧನೆ ಮಾಡಿದ ವಿದ್ಯಾರ್ಥಿಗಳ ಈ ಸಾಧನೆಗೆ ಸರಕುಳಿ ಶಿಕ್ಷಣ ಸಮಿತಿಯ ಅಧ್ಯಕ್ಷರು, ಸದಸ್ಯರು, ಪ್ರೌಢಶಾಲೆಯ ಮುಖ್ಯಾಧ್ಯಾಪಕರು, ಸಿಬ್ಬಂದಿಗಳು ಹಾಗೂ ಊರ ನಾಗರಿಕರು ಹರ್ಷ ವ್ಯಕ್ತಪಡಿಸಿದ್ದಾರೆ.

  Share This
  300x250 AD
  300x250 AD
  300x250 AD
  Leaderboard Ad
  Back to top