ಶಿರಸಿ: ನಗರದ ಕರೆಗುಂಡಿ ರಸ್ತೆ ಬಳಿ ಕಾಡುಪ್ರಾಣಿ ಬೇಟೆಗೆ ಹೊರಟಿದ್ದ ನಾಲ್ವರನ್ನು ಶಿರಸಿ ಮಾರುಕಟ್ಟೆ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಸಿದ ಘಟನೆ ಸೋಮವಾರ ನಡೆದಿದೆ.
ಲೈಸೆನ್ಸ್ ಇಲ್ಲದವನ ಕೈಗೆ ಬಂದೂಕು ನೀಡಿ ಕಾಡು ಪ್ರಾಣಿ ಬೇಟೆ ನಡೆಸುತ್ತಿದ್ದ ವೇಳೆ ದಾಳಿ ನಡೆಸಿ, ಆರೋಪಿತರಾದ ಹಿಪ್ಪೂರ್ ರೆಹಮಾನ್ ಮೊಹಮ್ಮದ್ ಹಲಿ ಕಸ್ತೂರಬಾ ನಗರ ಶಿರಸಿ, ಅಬ್ದುಲ್ ರಜಾಕ್ ಅಬ್ದುಲ್ ವಾಹೀದ್ ನೆಹರುನಗರ ಶಿರಸಿ, ಇನಾಯತ್ ಖಾನ್ ಉಡಾನ್ ಖಾನ್ ನೆಹರುನಗರ ಶಿರಸಿ ಹಾಗೂ ಮೋಹಮ್ಮದ್ ಇಸ್ಲಾಯಿಲ್ ಮೊಹಮ್ಮದ್ ಉಸ್ಥಾನ್ ಸಾಬ್ ಹೇರೂರು ಬಂಧಿತರು.
ಆರೋಪಿಗಳು ಕಾಡುಪ್ರಾಣಿಯ ಬೇಟೆಗಾಗಿ ಬಂದೂಕನ್ನು ಪಡೆದು ಸಂಚರಿಸುತ್ತಿರುವಾಗ ದಾಳಿ ನಡೆಸಿದ ಶಿರಸಿ ಮಾರುಕಟ್ಟೆ ಠಾಣೆ ಪೆÇಲೀಸರು ಆರೋಪಿಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ಬಂದೂಕು ಹಾಗೂ ಮಾರುತಿ 800 ಕಾರನ್ನು ವಶಪಡಿಸಿಕೊಂಡಿದ್ದಾರೆ.