ಶಿರಸಿ: ಯುವ ಕಾಂಗ್ರೆಸ್ 61ನೇ ಸಂಸ್ಥಾಪನ ದಿನಾಚರಣೆಯ ಅಂಗವಾಗಿ ಮಂಗಳವಾರ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಕುಮಾರ್ ಜೋಶಿ ನೇತೃತ್ವದಲ್ಲಿ ಚುನಾಯಿತ ಹಿಂದಿನ ಜಿಲ್ಲಾ ಅಧ್ಯಕ್ಷ ನಾಗರಾಜ್ ಮಡಿವಾಳ, ಪ್ರದೀಪ್ ಶೆಟ್ಟಿ ಮತ್ತು ಶ್ರೀಪಾದ್ ಹೆಗಡೆ ಕಡವೆ ಅವರನ್ನು ಆತ್ಮೀಯವಾಗಿ ಅಭಿನಂದಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಭೀಮಣ್ಣ ನಾಯ್ಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಕೆ ಭಾಗವತ್, ಶಿರಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ್ ಗೌಡ, ಬ್ಲಾಕ್ ಉಪಾಧ್ಯಕ್ಷ ಗಣೇಶ್ ದಾವಣಗೆರೆ, ಜಿಲ್ಲಾ ಕಾಂಗ್ರೆಸ್ ವಕ್ತಾರ ದೀಪಕ್ ದೊಡ್ದುರ್, ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ವಿಭಾಗದ ಅಧ್ಯಕ್ಷ ಬಸವರಾಜ್ ದೊಡ್ಮನಿ, ಅಲ್ಪಸಂಖ್ಯಾತ ವಿಭಾಗದ ಬ್ಲಾಕ್ ಅಧ್ಯಕ್ಷ ಜಬಿವುಲ್ಲಾ, ಯೂಥ್ ಕಾಂಗ್ರೆಸ್ ಶಿರಸಿ ಬ್ಲಾಕ್ ಉಪಾಧ್ಯಕ್ಷ ಫಾಹಾದ್ ಖಾನ್, ಯುವ ಮುಖಂಡರುಗಳಾದ ಶ್ರೀಧರ್ ಹೆಗಡೆ ಹಲಸರಿಗೆ, ಗಣಪತಿ ನಾಗ್, ಬಾಲಚಂದ್ರ ಹೆಗಡೆ ಮತ್ತು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.