ಯದಾ ಕಿಂಚಿಜ್ಞೋಹಂ ದ್ವಿಪ ಇವ ಮದಾಂಧಃ ಸಮಭವಮ್
ತದಾ ಸರ್ವಜ್ಞೋಸ್ಮೀತ್ಯಭವದವಲಿಪ್ತಂ ಮಮ ಮನಃ |
ಯದಾ ಕಿಂಚಿತ್ಕಿಂಚಿದ್ಬುಧಜನಸಕಾಶಾದವಗತಃ
ತದಾ ಮೂರ್ಖೋಸ್ಮೀತಿ ಜ್ವರ ಇವ ಮದೋ ಮೇ ವ್ಯಪಗತಃ |
ತಾನು ಅಲ್ಪಜ್ಞಾನಿಯಾಗಿದ್ದಕಾಲದಲ್ಲಿ ತನಗೇ ಎಲ್ಲ ತಿಳಿದಿದೆಯೆನ್ನುವ ಭ್ರಮೆಯಲ್ಲಿಆನೆಯಂತೆ ನನಗೊಂದು ಮದ ಇತ್ತು. ನನ್ನ ಮನಸಂತೂ ತನಗೇ ಎಲ್ಲವೂ ತಿಳಿದಿದೆಯೆನ್ನುವ ಅಹಂಕಾರವನ್ನು ಹೊಂದಿತ್ತು. ಆದರೆ ಕಾಲ ಕಳೆದಂತೆ ತಿಳಿದವರ ಸಂಗದಿಂದಾಗಿ ಸ್ವಲ್ಪ ಸ್ವಲ್ಪವೇ ತಿಳಿವು ನನ್ನದಾಗತೊಡಗಿತೋ, ಆಗ ತಾನು ಮೂರ್ಖನೆನ್ನುವುದು ಅರಿವಿಗೆ ಬಂದು ಜ್ವರದಂತೆ ಮೈಗೆಲ್ಲ ಏರಿದ್ದ ಮದವು ಇಳಿದುಹೋಯ್ತು. ಸುಭಾಷಿತಕಾರ ಇದನ್ನೆಲ್ಲ ತನಗೇ ಎಂಬಂತೆ ಹೇಳಿಕೊಂಡಿದ್ದರೂ ವಾಸ್ತವದಲ್ಲಿ ಈ ಮಾತುಗಳು ಶತಶಃ ನಮ್ಮೆಲ್ಲರಿಗೂ ಅನ್ವಯಿಸುವಂಥದು ಎನ್ನಲಡ್ಡಿಯಿಲ್ಲ.
ಶ್ರೀ ನವೀನ ಗಂಗೋತ್ರಿ
ಸುವಿಚಾರ
