ಶಿರಸಿ: ತಾಲೂಕಿನ ಮತ್ತಿಘಟ್ಟದ ಮಂಜುನಾಥ ಸಿದ್ಧಿ ಸುವರ್ಣ ಟಿವಿಯ ಪ್ರಸಿದ್ಧ ಡ್ಯಾನ್ಸ್ ರಿಯಾಲಿಟಿ ಶೋ ‘ಡ್ಯಾನ್ಸ್ – ಡ್ಯಾನ್ಸ್’ ಗೆ ಆಯ್ಕೆ ಯಾಗಿದ್ದಾನೆ.
ಮತ್ತಿಘಟ್ಟದ ಕೆಳಗಿನಕೇರಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಹಾಗೂ ಮುಂಡಗೋಡಿನ ಲೊಯೊಲ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಕಾರವಾರದ ಶಿವಾಜಿ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಶಿಕ್ಷಣ ಮುಗಿಸಿರುವ ಈತ ನಂತರ ಕೃಷಿ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ. ಅಡಿಕೆ ಕೊಯ್ಯುವ ಕೊನೆಗೌಡನಾಗಿಯೂ ಕೆಲಸ ಮಾಡಿ ಬದುಕು ನಡೆಸುತ್ತಿದ್ದ ಈತ ಈಗ ಪ್ರಸಿದ್ಧ ರಿಯಾಲಿಟಿ ಶೋ ಕ್ಕೆ ಆಯ್ಕೆಯಾಗುವ ಮೂಲಕ ಸಾಧನೆ ಮಾಡಿದ್ದಾನೆ.
ಬಾಲ್ಯದಿಂದಲೂ ಡ್ಯಾನ್ಸ್ ನಲ್ಲಿ ಆಸಕ್ತಿ ಹೊಂದಿದ್ದು ಸ್ವಯಂ ಕಲಿಕೆಯಿಂದ ಮೊಬೈಲ್ ನೋಡಿ ಹೆಜ್ಜೆ ಹಾಕಿ ನೃತ್ಯವನ್ನು ಕಲಿತಿದ್ದ ಈಗ ಸುವರ್ಣ ಟಿವಿಗೆ ಆಯ್ಕೆಯಾಗಿದ್ದು ಆ.21 ರಿಂದ ಕಾರ್ಯಕ್ರಮ ಪ್ರಸಾರವಾಗಲಿದೆ.
ಮತ್ತೀಘಟ್ಟದ ಗೋಪಾಲ ಸಿದ್ದಿ ಹಾಗೂ ರೆಣುಕಾ ಸಿದ್ದಿಯವರ ಪುತ್ರನಾಗಿರುವ ಮಂಜುನಾಥ ಸಿದ್ದಿಯ ಈ ಸಾಧನೆಗೆ ಮತ್ತಿಘಟ್ಟ ಊರಿನವರು ಹರ್ಷ ವ್ಯಕ್ತಪಡಿಸಿದ್ದಾರೆ ಹಾಗೂ ಎಲ್ಲಾ ಪ್ರೇಕ್ಷಕರು ಈತನಿಗೆ ಬೆಂಬಲ ನೀಡುವಂತೆ ಕೋರಿದ್ದಾರೆ.